Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಯುವನಿಧಿ ಯೋಜನೆಯ ಹಣ ಖಾತೆಗೆ ಜಮೆಯಾಗಲು ಈ ಕೆಲಸ ಕಡ್ಡಾಯ

ಯುವನಿಧಿ ಯೋಜನೆಯ ಹಣ ಖಾತೆಗೆ ಜಮೆಯಾಗಲು ಈ ಕೆಲಸ ಕಡ್ಡಾಯ

0
ಯುವನಿಧಿ ಯೋಜನೆಯ ಹಣ ಖಾತೆಗೆ ಜಮೆಯಾಗಲು ಈ ಕೆಲಸ ಕಡ್ಡಾಯ

ಇಂದು ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕ ಯುವತಿಯರಿಗಾಗಿ ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದು, ಈ ಯೋಜನೆಯ ಸೌಲಭ್ಯವನ್ನು ಹೆಚ್ಚಿನ ಯುವಕ ಯುವತಿಯರು ಪಡೆಯುತ್ತಿದ್ದಾರೆ. ಸರ್ಕಾರವು ನಿರುದ್ಯೋಗ ಯುವಕ, ಯುವತಿಯರಿಗೆ ಆರ್ಥಿಕ ಸಹಾಯ ನೀಡ್ತಾ ಇದ್ದು ಪದವೀಧರರಿಗೆ ಪ್ರತೀ ತಿಂಗಳು 3,000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ಮೊತ್ತವನ್ನು ನೋಂದಣಿ ಮಾಡಿದ ಯುವಕ ಯುವತಿಯರಿಗೆ ಹಣ ಜಮೆ ಮಾಡ್ತಾ ಇದೆ.‌

ಹೌದು, ಇನ್ಮುಂದೆ ಯುವನಿಧಿ ಯೋಜನೆಯ ಸೌಲಭ್ಯ ಸಿಗಬೇಕಾದ್ರೆ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆಯಾಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪರಿಶೀಲನೆ ಮಾಡಿ ಅರ್ಜಿ ಹಾಕಬೇಕಾಗುತ್ತದೆ.

ಇನ್ನು ಯುವ ನಿಧಿ ಯೋಜನೆಯ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು ಹಣ ಪಡೆಯಬೇಕೆಂದರೆ ಪ್ರತಿ ತಿಂಗಳು ನಮಗೆ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಸ್ವಯಂ ಘೋಷಿಸಿದ ಪ್ರಮಾಣ ಪತ್ರವನ್ನು ಕೂಡ ಪ್ರತಿ‌ತಿಂಗಳು ಸಲ್ಲಿಸಬೇಕು.

ಅರ್ಹತೆ ಏನು?

ಈ ಸೌಲಭ್ಯ ಎರಡು ವರ್ಷಗಳವರೆಗೆ ಮಾತ್ರ ಅನ್ವಯಿಸುತ್ತದೆ.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಇನ್ನು ಅರ್ಜಿ ಹಾಕಿದವರು ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.

ಅರ್ಜಿದಾರರು 2022-2023 ರಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.

ಈ ದಾಖಲೆ ಕಡ್ಡಾಯ ಬೇಕು
ಆಧಾರ್‌ ಕಾರ್ಡ್‌
ರೇಷನ್ ಕಾರ್ಡ್
ವಿಳಾಸ ದೃಢೀಕರಣ ಪತ್ರ
ಆದಾಯ ದೃಢೀಕರಣ ಪತ್ರ
ಶೈಕ್ಷಣಿಕ ದಾಖಲೆ
ಪೋಟೋ
ಬ್ಯಾಂಕ್‌ ಖಾತೆಯ ವಿವರ

 

LEAVE A REPLY

Please enter your comment!
Please enter your name here