Home ಆರೋಗ್ಯ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಈ ಹಣ್ಣುಗಳು ಉಪಯೋಗಕಾರಿ

ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಈ ಹಣ್ಣುಗಳು ಉಪಯೋಗಕಾರಿ

0
ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಈ ಹಣ್ಣುಗಳು ಉಪಯೋಗಕಾರಿ

ರಾಜ್ಯದಲ್ಲಿ ಮುಂಗಾರು ಮಳೆ ತೀವ್ರತೆ ಹೆಚ್ಚಾಗಿದೆ.‌ ಹೌದು ಈ ನಡುವೆ ರಾಜ್ಯದ ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿ ಬಾಧಿಸುವ ವಿವಿಧ ಮಾದರಿಯ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಕಾಡಲಾರಂಭಿಸಿದೆ. ಅದರಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಬಹಳಷ್ಟು ಅಧಿಕವಾಗಿದ್ದು, ದಿನೇದಿನೆ ಪ್ರಕರಣಗಳ ಸಂಖ್ಯೆ ಮತ್ತು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಹಾಗಾಗಿ ಈ ಸಂದರ್ಭದಲ್ಲಿ ಕೆಲವೊಂದು ಹಣ್ಣು, ತರಕಾರಿ ಸೇವನೆಯಿಂದ ಡೆಂಗ್ಯುವನ್ನು ನಿಯಂತ್ರಣ ಮಾಡಬಹುದಾಗಿದೆ.

ಡೆಂಗ್ಯು ಬಂದ ಸಂದರ್ಭದಲ್ಲಿ‌‌ ಪ್ರತಿ ದಿನ ನಿತ್ಯ ನಿಯಮಿತವಾಗಿ ಸುಮಾರು 30 ಮಿಲಿ ತಾಜಾ ಪರಂಗಿ ಹಣ್ಣಿನ ಎಲೆಗಳ ರಸ ಸೇವಿಸುವುದರಿಂದ ಪ್ಲೇಟ್ಲೆಟ್ ಗಳ ಸಂಖ್ಯೆ ಹೆಚ್ಚಾಗಿ ಡೆಂಗ್ಯೂ ವೈರಲ್ ಸೋಂಕು ಕಡಿಮೆಯಾಗುತ್ತದೆ

ಡೆಂಗ್ಯೂ ಬಂದ ಸಂದರ್ಭದಲ್ಲಿ ದಾಳಿಂಬೆ ಹಣ್ಣನ್ನು ತಿಂದರೆ ಉತ್ತಮ. ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಆಯಾಸ ಮತ್ತು ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಹೋಗಲಿದೆ.

ಕಿವಿ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಇ ಇರಲಿದ್ದು, ಇವುಗಳು ವ್ಯಕ್ತಿಯ ದೇಹದ ಎಲೆಕ್ಟ್ರೋಲೈಟ್ ಅಂಶಗಳನ್ನು ಸಮತೋಲನಗೊಳಿಸಿ ಏರುಪೇರಾಗುವ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಪ್ಲೇಟ್ ಲೆಟ್ ಕೌಂಟ್ ಹೆಚ್ಚು ಮಾಡಲಿದೆ.

ಇನ್ನು ವಿಟಮಿನ್‌ ಕೆ ಸಮೃದ್ಧವಾಗಿರುವ ಪಾಲಕ್‌ ಸೊಪ್ಪು ಪ್ಲೇಟ್ಲೆಟ್‌ ಸಂಖ್ಯೆಯನ್ನು ನೇರವಾಗಿ ಹೆಚ್ಚಿಸುವುದಿಲ್ಲ. ಆದರೆ ಇದು ರಕ್ತಕಣಗಳು ಉತ್ತಮವಾಗಿ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.

ಇನ್ನು ಬೀಟ್ರೋಟ್ ಸೇವನೆ ಉತ್ತಮ‌ ಇರಲಿದ್ದು, ಇದರಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೇರಳವಾಗಿರುತ್ತದೆ. ಬೀಟ್ರೋಟ್ ಸೇವನೆ ಈ ಸಂದರ್ಭದಲ್ಲಿ ಉತ್ತಮ.

ಡೆಂಗ್ಯೂ ಜ್ವರ ಹೊಂದಿದ ವ್ಯಕ್ತಿ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಬಹಳಷ್ಟು ಬೇಗ ಚೇತರಿಸಿಕೊಳ್ಳಬಹುದು.

ಇನ್ನು ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ‌ಸಿ ಮತ್ತು ಬಹಳಷ್ಟು ಆಂಟಿ ‌ಆಕ್ಸಿಡೆಂಟ್ ಅಂಶಗಳಿರುವುದರಿಂದ ಡೆಂಗ್ಯೂ ವೈರಸ್ ಹಾವಳಿಯನ್ನು ತಗ್ಗಿಸುವ ಮತ್ತು ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಹಾಗಾಗಿ ಈ ಸಂದರ್ಭದಲ್ಲಿ ಸೋಂಕಿಗೆ ಸಂಬಂಧ ಪಟ್ಟ ಸಮಸ್ಯೆಗಳು ಕಂಡು ಬಂದರೆ ಯಾವುದೇ ಬಗೆಯ ನಿರ್ಲಕ್ಷ್ಯ ಮಾಡದೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಔಷಧಿ ಪಡೆದುಕೊಳ್ಳಿ. ಹಾಗೂ ಇಂತಹ ಆಹಾರ ಕ್ರಮ ಪಾಲಿಸುವ ಮೂಲಕ ನಿಯಂತ್ರಣ ಮಾಡಿ.

 

LEAVE A REPLY

Please enter your comment!
Please enter your name here