Home ಸಿನೆಮಾ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೊಂದು ಮಹತ್ವದ ಮಾಹಿತಿ ಬಯಲು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೊಂದು ಮಹತ್ವದ ಮಾಹಿತಿ ಬಯಲು

0
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೊಂದು ಮಹತ್ವದ ಮಾಹಿತಿ ಬಯಲು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಸೇರಿ 17 ಮಂದಿ ನ್ಯಾಯಾಂಗಬಂಧನದಲ್ಲಿದ್ದಾರೆ. ಈ ನಡುವೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಎಫ್‌ಎಸ್‌ಎಲ್‌ ವರದಿಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ ಎಂದು ಹೇಳಲಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಸೇರಿ ಇನ್ನೂ 10 ಜನರ ಬೆರಳಚ್ಚು ಹೋಫಲಿಕೆಯಾಗಿರುವ ಕುರಿತು ಎಫ್‌ಎಸ್‌ಎಲ್‌ ವರದಿಯಲ್ಲಿ ಬಯಲಾಗಿದೆ ಎಂದು ಹೇಳಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ ದೇಹದ ಮೇಲೆ, ಆತನ ಬಟ್ಟೆಯ ಮೇಲೆ ಆರೋಪಿಗಗಳ ಫಿಂಗರ್‌ ಪ್ರಿಂಟ್‌ ಮ್ಯಾಚ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಇನ್ನು, ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಇತ್ತೀಚೆಗೆ ಯಾರೊಂದಿಗೂ ಬೆರೆಯದೇ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಜೈಲು ಸೇರಿ ಒಂದು ತಿಂಗಳು ಸಮೀಪಿಸುತ್ತಿದ್ದು, ಈಗಾಗಲೇ ದರ್ಶನ್‌ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿರುವುದು ಜೈಲು ಅಧಿಕಾರಿಗಳಿಗೆ ತಲೆ ತಂದೊಡ್ಡಿದೆ ಎಂದು ಹೇಳಲಾಗಿದೆ.

 

LEAVE A REPLY

Please enter your comment!
Please enter your name here