Home ಸುದ್ದಿಗಳು ರಾಜ್ಯ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ: ಕಾರ್ಕಳ ವ್ಯಾಪ್ತಿಯಲ್ಲಿ ಈವರೆಗೆ 51 ಪ್ರಕರಣ ಪತ್ತೆ

ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ: ಕಾರ್ಕಳ ವ್ಯಾಪ್ತಿಯಲ್ಲಿ ಈವರೆಗೆ 51 ಪ್ರಕರಣ ಪತ್ತೆ

0
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ: ಕಾರ್ಕಳ ವ್ಯಾಪ್ತಿಯಲ್ಲಿ ಈವರೆಗೆ 51 ಪ್ರಕರಣ ಪತ್ತೆ

ಕಾರ್ಕಳ: ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಹಚ್ಚಾಗುತ್ತಿದ. ಈ ಸೊಳ್ಳೆ ಡಂಗ್ಯೂ ಎನ್ನುವ ಮಹಾಮಾರಿಯನ್ನು ಹರಡುತ್ತಿದ್ದು, ರಾಜ್ಯದಲ್ಲಿ ಇದೀಗ ಡಂಗ್ಯೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕರಾವಳಿ, ಪಶ್ಚಿಮ ವಲಯಗಳಲ್ಲೂ  ಕೂಡ ಡೆಂಗ್ಯೂ ಹೆಚ್ಚುತ್ತಿದ್ದು, ಕಾರ್ಕಳ ಹಾಗೂ ಹಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ 51ಮಂದಿಗೆ ಡಂಗ್ಯೂ ಕಾಣಿಸಿಕೊಂಡಿದೆ.

ಕಾರ್ಕಳ ಗ್ರಾಮೀಣ ಭಾಗಗಳಾದ ಮಾಳ, ಕರ್ವಾಶೆ, ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಜನವರಿಯಿಂದ ಜೂನ್‌ ಅಂತ್ಯದವರೆಗೆ ಈ ಭಾಗದಲ್ಲಿ ಒಟ್ಟು 51 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ಇನ್ನು, ಈವರೆಗೆ ಕರ್ನಾಟಕದಲ್ಲಿ ಒಟ್ಟು, 7 ಸಾವಿರಕ್ಕೂ ಅಧಿಕ ಮಂದಿಗೆ ಡೆಂಗ್ಯೂ ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಒಂದರಲ್ಲಿಯೇ 1,908 ಪ್ರಕರಣಗಳು ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಆರು ಮಂದಿ ಡೆಂಗ್ಯೂ ಸೋಂಕಿಗೆ ಬಲಿಯಾಗಿರುವ ಕುರಿತು ವರದಿಯಾಗಿದೆ. ಡೆಂಗ್ಯೂ ಪ್ರಕರಣಗಳು ಹಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೂ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಲು ನಿರ್ದೇಶನವನ್ನು ಹೊರಡಿಸಿದೆ. ನೀರಿನ ಸಂಗ್ರಹಣಾ ತೊಟ್ಟಿಗಳು, ತೆರೆದ ಜಲಾಶಯಗಳು ಮತ್ತು ಸಾರ್ವಜನಿಕ ಶೌಚಾಲಯಗಳ ನೈರ್ಮಲ್ಯ ಮಾನದಂಡಗಳನ್ನು ನಿರ್ವಹಿಸುವಲ್ಲಿ ಸೂಚನ ನೀಡಿದೆ.

 

LEAVE A REPLY

Please enter your comment!
Please enter your name here