Home ಕರ್ನಾಟಕ ಕರಾವಳಿ ಉಡುಪಿಗೆ ಭೇಟಿ ಕೊಟ್ಟ ಫೈನಲ್‌ನಲ್ಲಿ ಅಭೂತಪೂರ್ವ ಕ್ಯಾಚ್‌ ಹಿಡಿದು ಭಾರತದ ಗೆಲುವಿಗೆ ಕಾರಣರಾದ ಸೂರ್ಯಕುಮಾರ್‌ ಯಾದವ್‌

ಉಡುಪಿಗೆ ಭೇಟಿ ಕೊಟ್ಟ ಫೈನಲ್‌ನಲ್ಲಿ ಅಭೂತಪೂರ್ವ ಕ್ಯಾಚ್‌ ಹಿಡಿದು ಭಾರತದ ಗೆಲುವಿಗೆ ಕಾರಣರಾದ ಸೂರ್ಯಕುಮಾರ್‌ ಯಾದವ್‌

0
ಉಡುಪಿಗೆ ಭೇಟಿ ಕೊಟ್ಟ ಫೈನಲ್‌ನಲ್ಲಿ ಅಭೂತಪೂರ್ವ ಕ್ಯಾಚ್‌ ಹಿಡಿದು ಭಾರತದ ಗೆಲುವಿಗೆ ಕಾರಣರಾದ ಸೂರ್ಯಕುಮಾರ್‌ ಯಾದವ್‌

ಉಡುಪಿ: 2024 ರ ಐಸಿಸಿ ಟಿ20 ವಿಶ್ವಕಪ್‌ ನಲ್ಲಿ ಟೀಂ ಇಂಡಿಯಾ ಜಯಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೂರ್ಯಕುಮಾರ್‌ ಯಾದವ್‌ ಮಂಗಳವಾರ ತಮ್ಮ ಪತ್ನಿಯ ಜೊತೆಗೆ ಉಡುಪಿಯ ಕಾಪುವಿನಲ್ಲಿರುವ ಮಾರಿಗುಡಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅತ್ಯದ್ಭುತ ಕ್ಯಾಚ್‌ ಹಿಡಿಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದ ಸೂರ್ಯ ಕುಮಾರ್‌ ಯಾದವ್‌ ತಮ್ಮ ಪತ್ನಿ ದೇವಿಶಾ ಶೆಟ್ಟಿಯೊಂದಿಗೆ ಮಾರಿಗುಡಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವಾಗ ಸೂರ್ಯಕುಮಾರ್‌ ಯಾದವ್‌ ದಂಪತಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಬಳಿಕ ದಂಪತಿಗಳಿಬ್ಬರು ಕಾಪು ಮಾರಿಯಮ್ಮನ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು, ಸೂರ್ಯಕುಮಾರ್‌ ಯಾದವ್‌ ಅವರ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದು, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವಾಗ ಮೊದಲು ಸ್ನೇಹತರಾಗಿದ್ದ ಇವರು ನಂತರ ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರಸ್ತುತ ಇಬ್ಬರೂ ಸಹ ಮುಂಬೈನಲ್ಲಿ ನೆಲೆಸಿದ್ದು, ಇಂದು ಉಡುಪಿಯ ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

 

LEAVE A REPLY

Please enter your comment!
Please enter your name here