Home ಕರ್ನಾಟಕ ಕರಾವಳಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಡ್ಡಿಗ್ಯಾಂಗ್‌ ಬಂಧಿಸಿದ ಮಂಗಳೂರು ಪೊಲೀಸರು

ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಡ್ಡಿಗ್ಯಾಂಗ್‌ ಬಂಧಿಸಿದ ಮಂಗಳೂರು ಪೊಲೀಸರು

0
ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚಡ್ಡಿಗ್ಯಾಂಗ್‌ ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರು: ಕರಾವಳಿಯನ್ನು ಬಚ್ಚಿಬೀಳಿಸಿದ್ದ ಚಡ್ಡಿಗ್ಯಾಂಗ್‌ ಅನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳೂರು ಪೊಲೀಸರು ಕೊನಗೂ ಬಂಧಿಸಿದ್ದಾರೆ. ಆ ಮೂಲಕ ಕರಾವಳಿ ಜನರು ನಿಟ್ಟುಸಿರು ಬಿಡುವಂತಾಗಿದೆ. ಮಂಗಳೂರು ನಗರದ ಮನೆಯೊಂದರಲ್ಲಿ ಕಳ್ಳತನ ನಡೆದ ಐದು ಗಂಟೆಯೊಳಗಾಗಿ ಪೊಲೀಸರು ಚಡ್ಡಿಗ್ಯಾಂಗ್‌ ಅನ್ನು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24ವ), ಭೂಪಾಲ್‌ನ ಮಯೂರ್‌(30ವ), ಬಾಲಿ (22ವ),ಗುಣಾ ಜಿಲ್ಲೆಯ ವಿಕ್ಕಿ(21ವ) ಬಂಧಿತ ಆರೋಪಿಗಳು.

ಮಂಗಳವಾರ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಮಂಗಳೂರು ನಗರದ ಕೋಟೆಕಣಿಯ ಮನೆಗೆ ನುಗ್ಗಿ ಮನೆಮಂದಿಯನ್ನು ಬೆದರಿಸಿ ಚಡ್ಡಿಗ್ಯಾಂಗ್‌ ದರೋಡೆ ಮಾಡಿತ್ತು. ಬಳಿಕ ಅದೇ ಮನೆಯವರ ಕಾರಿನಲ್ಲೇ ಪರಾರಿಯಾಗಿದ್ದ ಚಡ್ಡಿ ಗ್ಯಾಂಗ್‌ ಕಾರನ್ನು ಮುಲ್ಕಿ ಬಸ್‌ ನಿಲ್ದಾಣದ ಸಮೀಪ ನಿಲ್ಲಿಸಿ, ಮಂಗಳೂರು ಕಡೆಗೆ ಪ್ರಯಾಣಿಸಿದ್ದರು. ಸಿಸಿಟಿವಿ ಮೂಲಕ ಇವೆಲ್ಲವನ್ನೂ ಗಮನಿಸಿದ ಪೊಲೀಸರು ಕೆಸ್‌ಆರ್‌ಟಿಸಿ ಅಧಿಕಾರಿಗಳನ್ನು ವಿಚಾರಿಸಿದಾಗ ಅವರು ಬಾಗಲಕೋಟ ಕಡೆಯಿಂದ ಮಂಗಳೂರಿಗ ಬಂದಿರುವ ಮಾಹಿತಿ ಸಿಕ್ಕಿತ್ತು. ಬಳಿಕ ಬಸ್ಸಿನ ನಿರ್ವಾಹಕರು ನಾಲ್ವರು ತಮ್ಮ ಬಳಿ ಬಂದು ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಪಡದಿರುವುದಾಗಿ ಹೇಳಿದ್ದಾರೆ.

ಬಳಿಕ ಹಾಸನ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದು, ಸಕಲೇಶಪುರ ಡಿವೈಎಸ್‌ಪಿ, ಸಿಪಿಸಿ ಹಾಗೂ ಸಿಬ್ಬಂದಿಗಳ ತಂಡ ಸಕಲೇಶಪುರ ಸಮೀಪ ಬಸ್‌ ತಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡಸಲಾಯಿತು. ಈ ವೇಳೆ ಅವರು ತಾವ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರ ಬಳಿ ಇದ್ದ ಚಿನ್ನ, ವಜ್ರಾಭರಣ ಸಹಿತ ಎಲ್ಲವನ್ನೂ ವಶಪಡಿಸಿಕೊಳ್ಳಲಾಯಿತು.

 

LEAVE A REPLY

Please enter your comment!
Please enter your name here