Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ರಾಜ್ಯದ ರೈತರಿಗೆ ಗುಡ್ ನ್ಯೂಸ್, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ವಿತರಣೆ

ರಾಜ್ಯದ ರೈತರಿಗೆ ಗುಡ್ ನ್ಯೂಸ್, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ವಿತರಣೆ

0
ರಾಜ್ಯದ ರೈತರಿಗೆ ಗುಡ್ ನ್ಯೂಸ್, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ವಿತರಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಅಭಿವೃದ್ಧಿ ಮಾಡಲು ಇಂದು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಅದೇ ರೀತಿ ಕೃಷಿಯನ್ನು ಸುಧಾರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಪ್ರಧಾನ ಮಂತ್ರಿ ಕುಸುಮ್ ಯೋಜನೆ ಕೂಡ ಆರಂಭಿಸಿದೆ. ಹಾಗೇಯೇ ಕಿಸಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭ ಮಾಡಿದ್ದು ಪ್ರಧಾನಮಂತ್ರಿ ಕಿಸಾನ್ ಯೋಜನೆ 17ನೇ ಕಂತಿನ ಹಣ ಈಗಾಗಲೇ ಕೆಲವು ರೈತರಿಗೆ ಬಿಡುಗಡೆಯಾಗಿದೆ.

ಈಗಾಗಲೇ ವರ್ಷಕ್ಕೆ ಮೂರು ಕಂತುಗಳಲ್ಲಿ ಪ್ರತಿ ಕಂತಿಗೆ 2,000ರೂ ನಂತೆ 6,000 ರೂ ಜಮೆ ಆಗುತ್ತಿದ್ದ ಪಿ‌ಎಮ್ ಕಿಸಾನ್ ಯೋಜನೆಯ ಹಣವನ್ನು ಈ ಬಾರಿ 2,000 ರೂ ಹೆಚ್ಚಿಸಿ ಒಟ್ಟು ನಾಲ್ಕು ಕಂತುಗಳಲ್ಲಿ ವರ್ಷಕ್ಕೆ 8,000ರೂ ರೈತರ ಖಾತೆಗೆ ಜಮೆ ಮಾಡುವ ಬಗ್ಗೆ ಜುಲೈ 04, 2024 ರಂದು ಬಜೆಟ್ ಮಂಡನೆಯಲ್ಲಿ ತಿಳಿಯಲಿದೆ ಎನ್ನಲಾಗಿದೆ.

ಹಾಗೆಯೇ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಗೆ ರೈತರಿಗೆ ನೀರಾವರಿ ಸಮಸ್ಯೆಯಿಂದ ಪರಿಹಾರ ಕಾಣಲು ಪ್ರಧಾನ ಮಂತ್ರಿ ಕುಸುಮ್ ಯೋಜನೆ ಜಾರಿ ಮಾಡಿದ್ದು, ರೈತರಿಗೆ ಸೋಲಾರ್ ಪಂಪ್‌ಗಳನ್ನು ಅಳವಡಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಮಾಡುತ್ತದೆ. ಈ ಯೋಜನೆಯ ಮೂಲಕ ‌ ಸೌರ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಹಾಗೂ ಕೊಳವೆ ಬಾವಿಗಳ ಅಳವಡಿಕೆಗೆ ಸಹಾಯಧನ ಸಿಗಲಿದೆ

*ಈ ದಾಖಲೆ ಬೇಕು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ
ಆದಾಯದ ಪ್ರಮಾಣ ಪತ್ರ
ಮೊಬೈಲ್ ಸಂಖ್ಯೆ
ವಿಳಾಸದ ಪುರಾವೆ
ಪಾಸ್‌ಪೋರ್ಟ್‌ ಅಳತೆಯ ಫೋಟೋ

ಅರ್ಜಿದಾರರು ಭಾರತೀಯ ಪ್ರಜೆಯಾಗಿದ್ದು ಅರ್ಜಿ ಸಲ್ಲಿಕೆಗೆ ಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಅರ್ಜಿದಾರರಿಗೆ ಸರ್ಕಾರ 0.5mw ನಿಂದ 2mw ಸಾಮರ್ಥ್ಯದ ವಿದ್ಯುತ್ ಸ್ಥಾವರ ಖರೀದಿಸಲು ಸರ್ಕಾರ ನೆರವು ಒದಗಿಸುತ್ತದೆ.

ಇದರಲ್ಲಿ ಕೇಂದ್ರ ಸರ್ಕಾರವು 30 ಪರ್ಸೆಂಟ್‌ನಷ್ಟು ಸಬ್ಸಿಡಿಯಾಗಿ ನೀಡುತ್ತದೆ. ಇದರ ಜೊತೆಗೆ 30 ಪರ್ಸೆಂಟ್‌ನಷ್ಟು ಪಾಲನ್ನು ರಾಜ್ಯ ಸರ್ಕಾರವು ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಉಳಿದ 30 ಪರ್ಸೆಂಟ್‌ನಷ್ಟು ಹಣವನ್ನು ರೈತರು ಬ್ಯಾಂಕ್‌ನಿಂದ ಸಾಲವಾಗಿ ಪಡೆಯಬಹುದು.

ಈ ಯೋಜನೆಯ ಲಾಭ ಪಡೆಯಲು, ಸರ್ಕಾರದ ಅಧಿಕೃತ ವೆಬ್‌ಸೈಟ್ https://www.india.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದು.

 

LEAVE A REPLY

Please enter your comment!
Please enter your name here