Home ಅಂಕಣ ನಿಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚು ಸಿಮ್‌ ಇದ್ಯಾ..? ಹಾಗಾದ್ರೆ ಈ ಮಾಹಿತಿ ಓದಿ

ನಿಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚು ಸಿಮ್‌ ಇದ್ಯಾ..? ಹಾಗಾದ್ರೆ ಈ ಮಾಹಿತಿ ಓದಿ

0
ನಿಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚು ಸಿಮ್‌ ಇದ್ಯಾ..? ಹಾಗಾದ್ರೆ ಈ ಮಾಹಿತಿ ಓದಿ

ಇತ್ತೀಚಿನ ದಿನದಲ್ಲಿ ಮೊಬೈಲ್ ಇಲ್ಲದವರ ಸಂಖ್ಯೆ ಬಹಳ ಕಡಿಮೆ ಇದೆ ಎಂದು ಹೇಳಬಹುದು. ಮೊಬೈಲ್ ಹೊಂದಿದ್ದವರ ಬಳಿಯೇ ನಾಲ್ಕೈದು ಸೆಟ್ ಮೊಬೈಲ್ ಫೋನ್ ಮೂರು ನಾಲ್ಕು ಸಿಮ್ ಇರುವುದು ಸಾಮಾನ್ಯ. ಮನೆಗೆ ಒಂದು ಸಿಮ್, ಕಚೇರಿ ಕೆಲಸಕ್ಕೆ ಒಂದು ಸಿಮ್, ಸಾಮಾಜಿಕ ಜಾಲತಾಣದ ಬಳಕೆಗೆ ಒಂದು ಸಿಮ್, ಫ್ರೆಂಡ್ಸ್ ರಿಲೇಶನ್ ಗೆ ಒಂದು ಸಿಮ್. ಹೀಗೆ ಸಿಮ್ ಖರೀದಿ ಮಾಡುವುದು ಸುಲಭವಾದಂತೆ ಸಿಮ್ ಮೇಲಿನ ಜನರ ಆಸಕ್ತಿ ಕೂಡ ಅಧಿಕವಾಗುತ್ತಾ ಸಾಗಿದೆ. ಹಾಗಾಗಿ ಸಿಮ್ ಖರೀದಿದಾರರನ್ನು ಆಧರಿಸಿ ಇದೀಗ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ಒಬ್ಬರು ಎಷ್ಟು ಬೇಕಾದರೂ ಸಿಮ್ ಬಳಕೆ ಮಾಡಬಹುದು ಎಂದು ಅಂದುಕೊಳ್ಳುತ್ತಾರೆ ಆದರೆ ಇದಕ್ಕೂ ಕೂಡ ಕೆಲವು ನಿರ್ದಿಷ್ಟ ನಿಯಮ ಇದೆ. ಒಬ್ಬರು 9 ಸಿಮ್ ಕಾರ್ಡ್ ಬಳಕೆ ಮಾಡಲು ಅನುಮತಿ ಇದೆ. ಒಂದು ವೇಳೆ ಅದಕ್ಕೂ ಅಧಿಕ ಸಿಮ್ ಅನ್ನು ಬಳಕೆ ಮಾಡುತ್ತಿದ್ದರೆ ದೂರ ಸಂಪರ್ಕ ಇಲಾಖೆಯ ಕಾಯ್ದೆ 2023ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹಾಗಾದರೆ ಆ ಕ್ರಮ ಯಾವುದು ಎಂಬ ಇತ್ಯಾದಿ ಮಾಹಿತಿಯನ್ನು ಇಂದಿನ ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಿ.

ದಂಡ, ಜೈಲು ಶಿಕ್ಷೆ ವಿಧಿಸಲಾಗುವುದು
ಭಾರತದ ದೂರ ಸಂಪರ್ಕ ಇಲಾಖೆಯು 9 ಸಿಮ್ ಬಳಕೆಯನ್ನು ಒಬ್ಬ ವ್ಯಕ್ತಿ ಮಾಡಲು ಅನುಮತಿಸಿದೆ. ಜಮ್ಮು – ಕಾಶ್ಮಿರ, ಅಸ್ಸಾಂ , ಈಶಾನ್ಯ ರಾಜ್ಯ ಹಾಗೂ ಪರವಾನಿಗೆ ಪಡೆದ ಸೇನಾ ಪ್ರದೇಶದಲ್ಲಿ ಓರ್ವ ವ್ಯಕ್ತಿ ಗರಿಷ್ಠ 6 ಸಿಮ್ ಅನ್ನು ಬಳಕೆ ಮಾಡಬಹುದು. 2024ರ ಜೂನ್ 26ರಂದು ಹೊಸ ನಿಯಮ ಒಂದನ್ನು ಸೇರ್ಪಡೆ ಮಾಡಲಾಗಿದೆ ಅದರ ಪ್ರಕಾರ ಸಿಮ್ ಅನ್ನು ನಿಗಧಿ ಮಾಡಿದ್ದಕ್ಕಿಂತಲು ಹೆಚ್ಚು ಬಳಕೆ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಜೊತೆಗೆ ದಂಡ ಹಾಗೂ ಜೈಲು ಶಿಕ್ಷೆ ಸಹವಿಧಿಸಲಾಗುವುದು.

3ವರ್ಷ ಸಜೆ
ನೀವು ಮಿತಿ ಮೀರಿ ಸಿಮ್ ಕಾರ್ಡ್ ಹೊಂದಿದ್ದು ಬಳಕೆ ಮಾಡುವುದು ಕಂಡುಬಂದರೆ ಆಗ 50,000 ದ ತನಕ ದಂಡ ವಿಧಿಸಲಾಗುವುದು. ನಿಮ್ಮ ಹೆಸರಲ್ಲಿ ಬೇರೆಯವರು ಸಿಮ್ ಖರೀದಿ ಮಾಡಿದರೂ ಕೂಡ ಅದಕ್ಕೂ ಕೂಡ ನೀವೇ ಜವಾಬ್ದಾರರಾಗಲಿದ್ದೀರಿ. ಅದೇ ರೀತಿ ಮಿತಿ ಮೀರಿ ಸಿಮ್ ಕಾರ್ಡ್ ಖರೀದಿ ಮಾಡಿದರೆ 2ಲಕ್ಷ ರೂಪಾಯಿ ತನಕ ದಂಡ ವಿಧಿಸಲಾಗುವುದು. ವಂಚನೆ , ಸುಲಿಗೆ , ಮೋಸ , ಹನಿಟ್ರ್ಯಾಪ್ ಇತ್ಯಾದಿಗಳಿಗಾಗಿ ಸಿಮ್ ಕಾರ್ಡ್ ಬಳಕೆ ಮಾಡಿದರೆ ಆಗ ದಂಡದ ಜೊತೆಗೆ ಮೂರು ವರ್ಷ ಸಜೆ ಕೂಡ ಆಗಲಿದೆ. ಹಾಗಾಗಿ ನಿಮ್ಮ ಹೆಸರಲ್ಲಿ ಹೆಚ್ಚುವರಿ ಸಿಮ್ ಇದೆ ಅಥವಾ ಇಲ್ಲ ಎಂಬುದು ಖಾತರಿ ಪಡಿಸಿಕೊಳ್ಳಿ.

ಈ ವೆಬ್‌ಸೈಟ್‌ ಬಳಸಿ
ನೀವು ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ ಎಂಬುದು ತಿಳಿಯಲು ಈ ವೆಬ್‌ಸೈಟ್‌ ಅನ್ನು (https://tafcop.sancharsaathi.gov.in/telecomUser/) ಭೇಟಿ ನೀಡಿ ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೋದಿಸಿ. Captcha ಎಂಬ ಆಯ್ಕೆ ಬರಲಿದ್ದು ಅದನ್ನು ಕ್ಲಿಕ್ ಮಾಡಿದ್ದ ಬಳಿಕ ನಿಮ್ಮ ಮೊಬೈಲ್ ಗೆ OTP ಬರಲಿದೆ.OTP ಜನರೇಟ್ ಮಾಡಿದ್ದ ಬಳಿಕ ವೆಬ್‌ಸೈಟ್‌ ಲಾಗಿನ್ ಆಗಬಹುದು. ಆಗ ಸಿಮ್ ಕಾರ್ಡ್ ಆಪ್ಶನ್ ಬರಲಿದ್ದು ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಖರೀದಿ ಆಗಿದೆ ಎಂದು ತಿಳಿಯಲಿದೆ. ಆಗ ನೀವು ನಿಮ್ಮ ಹೆಸರಲ್ಲಿ ಆ್ಯಕ್ಟಿವ್ ಆಗಿರುವ ಅನಗತ್ಯ ಸಿಮ್ ಕಾರ್ಡ್ ಕಡಿತಗೊಳಿಸಲು not my number ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ಸಿಮ್ ಅಗತ್ಯವಾಗಿ ಇದ್ದರೆ required ಎಂಬ ಆಯ್ಕೆ ಸಹ ಇರಲಿದೆ. ಹೀಗೆ ನಿಮ್ಮ ಹೆಸರಲ್ಲಿ ಇತರರು ಸಿಮ್ ಬಳಕೆ ಮಾಡಿ ನಿಮಗೆ ತಾಪತ್ರಯ ಆಗುತ್ತಿದ್ದರೆ ಅದನ್ನು ತಡೆಯಬಹುದು.

 

LEAVE A REPLY

Please enter your comment!
Please enter your name here