Home ಆರೋಗ್ಯ ತಂಪು ಪಾನೀಯದೊಂದಿಗೆ ಚೀಸೀ ಆಹಾರ ಸೇವಿಸುವುದು ಭಾರೀ ಡೇಂಜರ್..!

ತಂಪು ಪಾನೀಯದೊಂದಿಗೆ ಚೀಸೀ ಆಹಾರ ಸೇವಿಸುವುದು ಭಾರೀ ಡೇಂಜರ್..!

0
ತಂಪು ಪಾನೀಯದೊಂದಿಗೆ ಚೀಸೀ ಆಹಾರ ಸೇವಿಸುವುದು ಭಾರೀ ಡೇಂಜರ್..!

ನಾವು ತಿನ್ನುವ ಆಹಾರವನ್ನು ಯಾವ ರೀತಿ ಸೇವನೆ ಮಾಡಬೇಕು ಎನ್ನುವುದು ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಕೆಲವೊಮ್ಮೆ ನಾವು ಯಾವುದರ ಬಗ್ಗೆಯೂ ಕಾಳಜಿ ವಹಿಸದೇ ಅವಶ್ಯಕತೆಗಿಂತ ಹೆಚ್ಚಾಗಿ ಅಥವಾ ಕಡಿಮೆಯಾಗಿ ಅಥವಾ ಯಾವುದ್ಯಾವುದೋ ಎರಡು ಆಹಾರವನ್ನು ಒಟ್ಟೊಟ್ಟಿಗೆ ಸೇವಿಸಿ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತೇವೆ. ಇದರ ಬದಲಾಗಿ ನಾವು ಯಾವೆಲ್ಲಾ ಆಹಾರವನ್ನು ಒಟ್ಟೊಟ್ಟಿಗೆ ಸೇವಿಸಬೇಕು ಎನ್ನುವುದರ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿದರೆ ಒಳ್ಳೆಯದು.

ನಾವು ಅಲ್ಲಲ್ಲಿ ಕೆಲವೊಂದು ಘಟನೆಗಳನ್ನು ಕೇಳುತ್ತಿರುತ್ತೇವೆ. ಹಲಸಿನ ಹಣ್ಣು ಮತ್ತು ಕೊಕೊ ಕೋಲಾ ಎರಡನ್ನು ಒಟ್ಟಿಗೆ ಸೇವಿಸಿ ಪ್ರಾಣವನ್ನು ಕಳೆದುಕೊಂಡಿರುವ ಘಟನೆಯನ್ನು ಹಿಂದೊಮ್ಮೆ ಸುದ್ದಿಯಾಗಿತ್ತು. ಅದೇ ರೀತಿಯಾಗಿ ಕೆಲವೊಂದು ಆಹಾರಗಳನ್ನು ಒಟ್ಟೊಟ್ಟಿಗೆ ಸೇವಿಸುವುದರಿಂದ ಅದು ರಿಯಾಕ್ಷನ್ ಆಗಿ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಇಲ್ಲವಾದಲ್ಲಿ ಸುಖಾ ಸುಮ್ಮನೆ ನಮ್ಮ ಆರೋಗ್ಯವನ್ನು ನಮ್ಮ ಕೈಯಾರೆ ನಾವು ಹಾಳು ಮಾಡಿಕೊಂಡತಾಗುತ್ತದೆ. ಹೀಗಾಗಿ ಯಾವೆಲ್ಲಾ ಆಹಾರವನ್ನು ಒಟ್ಟಿಗೆ ಸೇವಿಸಬಾರದು ಎನ್ನುವ ಕೆಲವೊಂದು ವಿಚಾರವನ್ನು ನಿಮಗೆ ಹೇಳ್ತೀವಿ ಮುಂದಿನ ಮಾಹಿತಿ ಓದಿ..

ಪಾಲಕ್ ಮತ್ತು ಪನ್ನೀರ್ ಅನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಅಧಿಕವಾಗಿದ್ದು ಇದು ಪೋಷಕಾಂಶ ವಿರೋಧಿ ಸಂಯುಕ್ತವಾಗಿದೆ. ಆಕ್ಸಲೇಟ್ ದೇಹಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಕಡಿಮೆ ಕಬ್ಬಿಣದ ಹೀರಿಕೊಳ್ಳುವಿಕೆಗೆ ಕೊಡುಗೆ ನೀಡುತ್ತದೆ. ಮತ್ತೊಂದೆಡೆ ಪನ್ನೀರ್ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ ಆದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಹೆಚ್ಚು ಪನ್ನೀರ್ ಅನ್ನು ಬಳಸುವುದರಿಂದ ದೇಹದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆದ್ದರಿಂದ, ಈ ಎರಡು ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಅನ್ನು ಉಂಟುಮಾಡುವ ಮೂಲಕ ದೇಹದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ.

ಇನ್ನು ಹಾಲಿನೊಂದಿಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದು ಕೂಡ ಅಪಾಯಕಾರಿ. ಹಾಲು ಪ್ರತ್ಯೇಕವಾಗಿ ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಕಿತ್ತಳೆ, ನಿಂಬೆ ಅಥವಾ ಇತರ ಯಾವುದೇ ಸಿಟ್ರಸ್ ಹಣ್ಣುಗಳೊಂದಿಗೆ ಹಾಲನ್ನು ತೆಗೆದುಕೊಂಡಾಗ ಹಾಲು ಹೆಪ್ಪುಗಟ್ಟುತ್ತದೆ. ಇದು ಗ್ಯಾಸ್ಟ್ರಿಕ್ ಮತ್ತು ತೀವ್ರವಾದ ಶಾಖದ ಸುಡುವಿಕೆಗೆ ಕಾರಣವಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರಿಗೆ, ಈ ಹಣ್ಣುಗಳೊಂದಿಗೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸಾಮಾನ್ಯವಾಗಿ ಎಲ್ಲರೂ ಮಾಡುವ ದೊಡ್ಡ ತಪ್ಪು ಎಂದರೆ ತಂಪು ಪಾನೀಯದೊಂದಿಗೆ ಚೀಸೀ ಆಹಾರ ಸೇವನೆ ಮಾಡುವುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಆದ್ದರಿಂದ, ಚೀಸೀ ಆಹಾರದೊಂದಿಗೆ ತಂಪು ಪಾನೀಯವನ್ನು ಯಾವುದೇ ಕಾರಣಕ್ಕೂ ಕುಡಿಯಬಾರದು. ಇದು ಆಯಾಸ, ಅಸ್ವಸ್ಥತೆ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತದೆ.

 

LEAVE A REPLY

Please enter your comment!
Please enter your name here