
ಉತ್ತರ ಪ್ರದೇಶ: ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಆರ್ ಎಸ್ಎಸ್ ಕುರಿತ ವಿವಾದಾತ್ಮಕ ಪುಸ್ತಕ ದೊರೆತ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆದಿದೆ.
ಅರ‍್ಸುಯ್ಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ಈ ಘಟನೆ ನಡೆದಿದೆ.
‘ಆರ್ ಎಸ್ಎಸ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಆರ್ಗನೈಸೇಷನ್ ಇನ್ ದಿ ಕಂಟ್ರಿ’ ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್ಎಂ ಮುಷರಫ್ ಎಂಬವರು ಬರೆದಿದ್ದು, ಮದರಸಾದಲ್ಲಿ ಆರ್ ಎಸ್ಎಸ್ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್ ಈ ಪುಸ್ತಕವನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ಪುಸ್ತಕದ ಜೊತೆಗೆ ಅವರ ಬಳಿಯಿಂದ 1ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
