Home ಸುದ್ದಿಗಳು ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಶಿಕ್ಷಣ ವರ್ಗ ಕಾರ್ಯಾಗಾರ

ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಶಿಕ್ಷಣ ವರ್ಗ ಕಾರ್ಯಾಗಾರ

0
ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಶಿಕ್ಷಣ ವರ್ಗ ಕಾರ್ಯಾಗಾರ

ಉಡುಪಿ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಇದರ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಉಡುಪಿಯ ಹಿರಿಯ ವಕೀಲರಾದ ಬಿ ನಾಗರಾಜ್ ರವರ “ಕೃಷ್ಣಾನುಗೃಹ” ನಿವಾಸದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಅಧ್ಯಕ್ಷರಾದಂತಹ ಸಂತೋಷ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದಂತ ಬಿ ನಾಗರಾಜ್ ಅವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಪ್ರಾಂತ್ಯದ ಕಾರ್ಯಧ್ಯಕ್ಷರಾದಂತ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು.

ಅಭ್ಯಾಸ ವರ್ಗವು ಮೂರು ಅವಧಿಯಲ್ಲಿ ನಡೆಯಿತು, ಅಭ್ಯಾಸವರ್ಗದ ವಿಷಯಗಳಾದ ಭಾರತೀಯ ನ್ಯಾಯ ಸoಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕುರಿತು ಉಚ್ಚ ನ್ಯಾಯಾಲಯದ ಖ್ಯಾತ ವಕೀಲರಾಗಿರುವ ಅಮರ್ ಕೊರೆಯ, ಕಮರ್ಷಿಯಲ್ ಕೋರ್ಟ್ ಆಕ್ಟ್ ಕುರಿತು ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಎಂ ಎನ್ ಕುಮಾರ್ ಮತ್ತು ಸಂಘಟನಾತ್ಮಕ ವಿಷಯದ ಬಗ್ಗೆ ಮಂಗಳೂರು ವಕೀಲರಾದ ಜಗದೀಶ್ ಕೆಆರ್  ಮಾಹಿತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಧಿವ್ಯಕ್ತ ಪರಿಷತ್ತಿನ ದಕ್ಷಿಣ ಪ್ರಾಂತದ ಉಪಾಧ್ಯಕ್ಷರಾದ ರೋಹಿತ್ ಗೌಡ ಮತ್ತು ಮಂಗಳೂರು ವಿಭಾಗದ ಸಂಚಾಲಕರಾದಂತಹ ಚೇತನ್ ನಾಯಕ್ ಎಸ್, ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಪ್ರಮೋದ್ ಹಂದೆ, ನ್ಯಾಯವಾದಿ ಅಮೃತ ಕಲಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಅಧಿವಕ್ತಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದಂತಹ ಆರೂರು ಸುಕೇಶ್ ಶೆಟ್ಟಿ ಅವರು ಧನ್ಯವಾದವನ್ನು ಸಮರ್ಪಿಸಿದರು, ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

 

LEAVE A REPLY

Please enter your comment!
Please enter your name here