Home ಸುದ್ದಿಗಳು ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು

ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು

0
ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು

ಶಿವಮೊಗ್ಗ: ಶಿವಮೊಗ್ಗದ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.

ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ.

ಮನೆಯಲ್ಲಿ ಆಟವಾಡುವ ವೇಳೆ ಮಗುವಿಗೆ ಜ್ಯೂಸ್ ಬಾಟಲ್ ಸಿಕ್ಕಿದ್ದು, ಮುಚ್ಚಳ ಬಿಚ್ಚಿ ಬಾಯಿಗೆ ಹಾಕಿಕೊಂಡಿದೆ. ಬಾಟೆಲ್‌ ಮುಚ್ಚಳ ನುಂಗಿದ ಕೂಡಲೇ ಮಗು ಉಸಿರಾಡಲು ಆಗದೆ ಒದ್ದಾಡಿದೆ, ಜೋರಾಗಿ ಅಳುವ ಸದ್ದು ಕೇಳಿ ಪೋಷಕರು ಬಂದಿದ್ದಾರೆ.

ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮಗು ಆದಾಗಲೇ ಜೀವ ಬಿಟ್ಟಿತ್ತು. ಮಗು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

LEAVE A REPLY

Please enter your comment!
Please enter your name here