
ಹಾಸನ: ಸಕಲೇಶಪುರ ತಾಲ್ಲೂಕಿನ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿ ಸಿಎಂ ಯೋಜನೆಯನ್ನು ಉದ್ಘಾಟಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಾಥ್ ನೀಡಿದರು.
ಯೋಜನೆ ಚಾಲನೆಗೂ ಮುನ್ನ ಸಕಲೇಶಪುರದ ದೊಡ್ಡನಾಗರದಲ್ಲಿ ಹೋಮ ನಡೆಸಲಾಯಿತು. ಯೋಜನೆಯ ಡಂಪಿಂಗ್ ಸ್ಟೇಷನ್‌ನಲ್ಲಿ ಹೋಮ ನಡೆಯಿತು. ಚಾಮುಂಡಿ ಬೆಟ್ಟದ ಶಶಿಶೇಖರ್ ದೀಕ್ಷಿತ್ ಹೋಮ ನಡೆಸಿಕೊಟ್ಟರು.
ಇದಕ್ಕೂ ಮುನ್ನ ಟೇಪ್ ಕತ್ತರಿಸುವ ಮೂಲಕ ದೊಡ್ಡನಗರದ ಪಂಪ್ ಹೌಸ್ ಉದ್ಘಾಟಿಸಿದರು. ಈ ವೇಳೆ ಸಚಿವ ಸಂಪುಟದ ಸಹೋದ್ಯೋಗಿಗಳು ಸಿಎಂ, ಡಿಸಿಎಂಗೆ ಸಾಥ್ ನೀಡಿದರು.
