
ಚಂಡೀಗಢ: ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಸುದ್ದಿಯಲ್ಲಿರುವ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ.
ಕಾಂಗ್ರೆಸ್ ಪಕ್ಷವು ಚುನಾವಣೆಗೆ 31 ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹರಿಯಾಣದ ಜುಲಾನಾದಿಂದ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ. ಲಾಡ್ವಾದಿಂದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಕಾಂಗ್ರೆಸ್‌ನ ಮೇವಾ ಸಿಂಗ್ ಕಣಕ್ಕಿಳಿಯಲಿದ್ದಾರೆ.
ಸುರೇಂದರ್ ಪನ್ವಾರ್ ಸೋನಿಪತ್‌ನಿಂದ, ಭರತ್ ಭೂಷಣ್ ಬಾತ್ರಾ ರೋಹ್ಟಕ್‌ನಿಂದ, ಕುಲದೀಪ್ ವಾಟ್ಸ್ ಬದ್ಲಿಯಿಂದ, ಚಿರಂಜೀವ್ ರಾವ್ ರೆವರಿಯಿಂದ ಮತ್ತು ನೀರಜ್ ಶರ್ಮಾ ಫರಿದಾಬಾದ್ ಎನ್‌ಐಟಿಯಿಂದ ಸ್ಪರ್ಧಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್‌ನಿಂದ ಸ್ಪರ್ಧಿಸಲಿದ್ದಾರೆ.
