
ನೈರೋಬಿ: ನೈರಿ ಕೌಂಟಿಯಲ್ಲಿರುವ ಹಿಲ್ ಸೈಡ್ ಎಂಡರಾಶಾ ಪ್ರಾಥಮಿಕ ವಸತಿ ಶಾಲೆಯೊಂದರಲ್ಲಿ ಬೆಂಕಿ ಅವಘಡ ನಡೆದ ಘಟನೆ ನಡೆದಿದೆ.
ಈಘಟನೆಯಲ್ಲಿ 17 ಮಕ್ಕಳು ಸಾವನ್ನಪ್ಪಿದ್ದು, 70 ಮಂದಿ ಕಾಣೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಕೊಠಡಿಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಲಗಿದ್ದರು ಎಂದು ತಿಳಿದು ಬಂದಿದೆ.
17 ಮೃತದೇಹಗಳು ಪತ್ತೆಯಾಗಿದ್ದು, ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದು, ಇನ್ನೂ ಕಾಣೆಯಾದವರನ್ನು ಪತ್ತೆಹಚ್ಚುವಂತೆ ಮನೆಯವರು ಹಾಗೂ ಸಂಬಂಧಿಕರು ಒತ್ತಾಯ ಹೇರುತ್ತಿದ್ದಾರೆ.
ಡಿಎನ್‌ಎ ಪರೀಕ್ಷೆ ನಡೆಸಿ ಮೃತರ ಗುರುತು ಪತ್ತೆಗೆ ಕ್ರಮಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ರೆಸಿಲಿಯಾ ತಿಳಿಸಿದ್ದಾರೆ.
