
ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕನ್ನಡ ಚಿತ್ರ ನಿರ್ದೇಶಕ ನಾಗಶೇಖರ್ ಅವರ ಕಾರು ಅಪಘಾತಕ್ಕೀಡಾಗಿದೆ.
ರಭಸವಾಗಿ ಬಂದ ಕಾರು ಮರಕ್ಕೆ ಗುದ್ದಿತ್ತು. ಇತ್ತ ಫುಟ್‌ಪಾತ್ ಮೇಲೆ ನಿಂತಿದ್ದ ಮಹಿಳೆಗೂ ಕಾರು ಡಿಕ್ಕಿ ಹೊಡೆದಿದೆ.
ಫುಟ್‌ಪಾತ್ ಮೇಲೆ ನಿಂತಿದ್ದ ಲಕ್ಷ್ಮಿ ಎಂಬ ಮಹಿಳೆಗೆ ಸಣ್ಣ-ಪುಟ್ಟ ಗಾಯವಾಗಿದೆ.
ಈ ಸಂಬಂಧ ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದು, ಕಾರು ಓಡಿಸಿಕೊಂಡು ಬರುವಾಗ ಕಣ್ಣು ಮಂಜು ಆಗಿ ನಿಯಂತ್ರಣ ಕಳೆದುಕೊಂಡು ಕಾರು ಫುಟ್‌ಪಾತ್ ಮೇಲೆ ಹತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸ್ವತಃ ನಾಗಶೇಖರ್ ಅವರೇ ಆ ಮಹಿಳೆಯನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಅಪಘಾತದ ಸಂಬಂಧ ಸಂಚಾರಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಸೆಲ್ಪ್ ಆಕ್ಸಿಡೆಂಟ್ ಹಿನ್ನೆಲೆಯಲ್ಲಿ ಇನ್ಸೂರೆನ್ಸ್ ಕ್ಲೈಮ್ ಮಾಡಲು ಒಂದು ಮೆಮೋ ಕಾಪಿ ಕೊಡುವುದಾಗಿ ಪೊಲೀಸರು ತಿಳಿಸಿದ್ದಾರೆ.
