Home ಸುದ್ದಿಗಳು ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

0
ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್​ಪೋ ಮಾರ್ಟ್​ನಲ್ಲಿ ನಡೆಯಲಿರುವ ಸೆಮಿಕಾನ್ ಇಂಡಿಯಾ 2024 ಕಾನ್ಫೆರೆನ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರದ ಜಾಗತಿಕ ಸಂಸ್ಥೆಗಳ ಸಿಇಒಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಮೊದಲಾದ ಹಲವರು ಉಪಸ್ಥಿತರಿದ್ದರು.

ಈ ಸಮಾವೇಶದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. 150ಕ್ಕೂ ಹೆಚ್ಚು ತಜ್ಞರು ಮಾತನಾಡಲಿದ್ದಾರೆ.

ಸೆಪ್ಟೆಂಬರ್ 13ರವರೆಗೆ ಮೂರು ದಿನಗಳ ಕಾಲ ನಡೆಯುವ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಸೆಮಿಕಂಡಕ್ಟರ್ ಭವಿಷ್ಯ ರೂಪಿಸುವುದು ಈ ಬಾರಿಯ ಥೀಮ್ ಆಗಿದೆ.

ಬಹುತೇಕ ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ನಿರ್ಮಿಸಲು ಆಸಕ್ತಿ ತೋರಿವೆ. ಚಿಪ್ ತಯಾರಿಕೆಗೆ ಪೂರಕವಾದ ಇತರ ಉದ್ದಿಮೆಗಳೂ ಕೂಡ ಭಾರತದಲ್ಲೇ ನೆಲೆಗೊಳ್ಳಲಿವೆ.

ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ಅಭಿವೃದ್ಧಿಪಡಿಸಬಲ್ಲಂತಹ ಕಾರ್ಯತಂತ್ರ ಮತ್ತು ನೀತಿಗಳನ್ನು ಪ್ರಚುರಪಡಿಸಲಾಗುತ್ತದೆ.

 

LEAVE A REPLY

Please enter your comment!
Please enter your name here