Home ಸುದ್ದಿಗಳು ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನ

ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನ

0
ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನ

ಪಿಎಂ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿ ಮಾಡಿದ್ದು ಅರ್ಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ.

ವಿದ್ಯಾರ್ಥಿಗಳ ಶಿಕ್ಷಣ ಖರ್ಚು ವೆಚ್ಚಗಳಿಗೆ ಈ ಆರ್ಥಿಕ ಸೌಲಭ್ಯ ನೆರವಾಗಲಿದ್ದು, ಬಡ ಕುಟುಂಬದ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಜಾರಿ ಮಾಡಿದ್ದು 9, 10, 11, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವರ್ಷಕ್ಕೆ 24,000ರೂ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಮೆರಿಟ್ ಪಟ್ಟಿಗೆ ಅನುಗುಣವಾಗಿ ಈ ವಿದ್ಯಾರ್ಥಿ ವೇತನ ನೀಡಲಿದ್ದು ನಿಮ್ಮ ಮುಂದಿನ ಅಧ್ಯಯನವನ್ನು ಮುಂದುವರಿಸುದಾದರೆ ಮಾತ್ರ ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯ ಪ್ರಯೋಜನವನ್ನು ನೀಡಲಾಗುತ್ತದೆ.

ಅರ್ಜಿ ಹಾಕಲು ಇತರೆ ಹಿಂದುಳಿದ ವರ್ಗ (OBC),ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು (DNT/SNT)ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಯಾರೆಲ್ಲ ಅರ್ಹರು:
*ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ 2024-24 ಗೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿಗಳು ಮಾತ್ರ ಅರ್ಹರು.
*ವಿದ್ಯಾರ್ಥಿಗಳು ತಮ್ಮ 8ನೇ ತರಗತಿ ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿರಬೇಕು.
*ಅರ್ಜಿದಾರರು ಕಾಯ್ದಿರಿಸಿದ ವರ್ಗಗಳಿಗೆ ಸೇರಿರಬೇಕು.
*ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ 2.5 ಲಕ್ಷ ಮೀರಬಾರದು.
*2024-25ರ ಶೈಕ್ಷಣಿಕ ಅವಧಿಗೆ, ವಿದ್ಯಾರ್ಥಿಗಳು 9ನೇ, 10ನೇ ಅಥವಾ 11ನೇ ತರಗತಿಗೆ ದಾಖಲಾಗಿರಬೇಕು
*ಮಹಿಳಾ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ.

ಈ ದಾಖಲೆ ಅಗತ್ಯ:
*ಫೋಟೋ
*ಆಧಾರ್ ಕಾರ್ಡ್
*ವಿದ್ಯಾರ್ಥಿನಿಯ ಸಹಿ
*ಜಾತಿ/ಆದಾಯ
*ಮಾರ್ಕ್ ಕಾರ್ಡ್
*ಫಿ- ರಿಸಿಪ್ಟ್
*ಮೊಬೈಲ್ ನಂ

ಅರ್ಜಿ ಸಲ್ಲಿಕೆ ಮಾಡಲು ಸೆಪ್ಟೆಂಬರ್ 30ಕೊನೆಯ ದಿನವಾಗಿದ್ದು https://yet.nta.ac.in/c/register/ ಈ ಲಿಂಕ್‌ಗೆ ತೆರಳಿ ವಿದ್ಯಾರ್ಥಿಯ ಹೆಸರು, ಇ-ಮೇಲ್ ಐಡಿ, ಜನ್ಮ ದಿನಾಂಕ, ಪಾಸ್‌ವರ್ಡ್ ಹಾಕಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಿ ಅರ್ಜಿ ಸಲ್ಲಿಸಬಹುದು.

 

LEAVE A REPLY

Please enter your comment!
Please enter your name here