Home ಸುದ್ದಿಗಳು ಸೆ.17ವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ವಿಸ್ತಣೆ

ಸೆ.17ವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ವಿಸ್ತಣೆ

0
ಸೆ.17ವರೆಗೆ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ ವಿಸ್ತಣೆ

ಬೆಂಗಳೂರು: ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರ ನ್ಯಾಯಾಂಗ ಬಂಧನ  ಅವಧಿ ಸೆ.17ವರೆಗೆ ವಿಸ್ತಣೆಯಾಗಿದೆ.

ಪವಿತ್ರಾ ಗೌಡ, ದರ್ಶರ್ನ್‌ ಸೇರಿದಂತೆ ಎಲ್ಲಾ ಆರೋಪಿಗಳ ಹೆಸರನ್ನು ನ್ಯಾಯಾಧೀಶರು ಕರೆದಾಗ ಆರೋಪಿಗಳು ಎಸ್‌ ಸರ್‌ ಎಂದು ಹೇಳಿ ವಿಚಾರಣೆಗೆ ಹಾಜರಾಗಿರುವುದನ್ನು ದೃಢೀಕರಿಸಿದರು.

ಈ ವೇಳೆ ಸಂಪೂರ್ಣ ಚಾರ್ಜ್‌ಶೀಟ್‌ ನೀಡಬೇಕು. ಎಲೆಕ್ಟ್ರಾನಿಕ್ಸ್‌ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಆದರೆ ಇನ್ನೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದರು.

ಇಂದು ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.

 

LEAVE A REPLY

Please enter your comment!
Please enter your name here