Home ಸುದ್ದಿಗಳು ಪ್ರಧಾನಿ ಮೋದಿ ನಿವಾಸಕ್ಕೆ ಹೊಸ ಸದಸ್ಯೆ ದೀಪಜ್ಯೋತಿಯ ಆಗಮನ

ಪ್ರಧಾನಿ ಮೋದಿ ನಿವಾಸಕ್ಕೆ ಹೊಸ ಸದಸ್ಯೆ ದೀಪಜ್ಯೋತಿಯ ಆಗಮನ

0
ಪ್ರಧಾನಿ ಮೋದಿ ನಿವಾಸಕ್ಕೆ ಹೊಸ ಸದಸ್ಯೆ ದೀಪಜ್ಯೋತಿಯ ಆಗಮನ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಸದಸ್ಯೆಯ ಆಗಮನವಾಗಿದೆ.

ಪ್ರಧಾನಿಯವರ ಮನೆಯ ಆವರಣದಲ್ಲಿರುವ ಹಸು ಕರು ಹಾಕಿದ್ದು, ಆ ಕರುವಿನ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕರುವಿನ ಹಣೆ ಮೇಲೆ ವಿಶಿಷ್ಟವಾದ ಗುರುತು ಇದು, ಇದು ಬೆಳಕಿನ ಸಂಕೇತವನ್ನು ಹೋಲುತ್ತದೆ. ಈ ವಿಶಿಷ್ಟ ವೈಶಿಷ್ಟ್ಯವನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಕರುವಿಗೆ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ.

ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಪ್ರಧಾನಿ ಮೋದಿ ಅವರು ಕರುವನ್ನು ಪ್ರಾರ್ಥನೆ ಮಾಡಿ ಪ್ರೀತಿಯಿಂದ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಪ್ರಧಾನಿ ಕರುವನ್ನು ಮುದ್ದಾಡುವುದು ಮತ್ತು ಆಟವಾಡುವುದು, ಅದರ ಹಣೆಯ ಮೇಲೆ ಮುತ್ತಿಡುವ ವಿಡಿಯೊದಲ್ಲಿ ಕಾಣಬಹುದು.

ಪ್ರಧಾನಮಂತ್ರಿಯವರು ಕರುವನ್ನು ಮನೆಯೊಳಗೆ ಕರೆತಂದು ಅದಕ್ಕೆ ಶಾಲು ಹೊದಿಸಿ ಹೂಮಾಲೆ ಹಾಕುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here