Home ಸುದ್ದಿಗಳು ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ: ಬಿಸಿ ರೋಡ್ ಮತ್ತೆ ಉದ್ವಿಗ್ನ

ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ: ಬಿಸಿ ರೋಡ್ ಮತ್ತೆ ಉದ್ವಿಗ್ನ

0
ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ: ಬಿಸಿ ರೋಡ್ ಮತ್ತೆ ಉದ್ವಿಗ್ನ

ಮಂಗಳೂರು: ಮುಸ್ಲಿಂ ಮತ್ತು ಹಿಂದೂ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಬಿಸಿ ರೋಡ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಆದರೆ ಪೋಲೀಸರ ಮಧ್ಯ ಪ್ರವೇಶ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿತ್ತು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ಪೊಲೀಸರು ಈದ್ ಮಿಲಾದ್ ಹಿನ್ನೆಲೆ ಮುಸ್ಲಿಂ ಯುವಕರಿಗೆ ಬೈಕ್ ರ‍್ಯಾಲಿ ಅನುಮತಿ ನೀಡಿದ್ದರು. ಈ ಬೈಕ್ ರ‍್ಯಾಲಿಗೆ ಅವಕಾಶ ಕೊಟ್ಟಿದ್ದು ಮತ್ತೆ ಪರಿಸ್ಥಿತಿ ಹದಗೆಡುವಂತೆ ಮಾಡಿದೆ.

ಈ ವೇಳೆ ಬೈಕ್ ರ‍್ಯಾಲಿ ಮಾಡುತ್ತಾ ಮುಸ್ಲಿಂ ಯುವಕರು ಜೋರಾಗಿ ಹಾರ್ನ್ ಮಾಡುತ್ತಾ, ಜೋರಾಗಿ ಎಕ್ಸಲೇಟರ್ ಕೊಟ್ಟು ಹಿಂದೂ ಕಾರ್ಯಕರ್ತರ ಸಮೀಪದಲ್ಲೇ ಅಣಕಿಸುತ್ತಾ ಮುಂದೆ ಸಾಗಿದ್ದು, ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತು.

ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ಭಗವಾಧ್ವಜ ಪ್ರದರ್ಶಿಸಿದರು. ಮುಸ್ಲಿಂ ಬೈಕ್​ ರ‍್ಯಾಲಿಗೆ ಅವಕಾಶ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ನಮಗೆ ಮೆರವಣಿಗೆಗೆ ಅನುಮತಿ ನೀಡಿಲ್ಲ. ಹೀಗಿರುವಾಗ ಅವರಿಗೆ (ಮುಸ್ಲಿಮರಿಗೆ) ಹೇಗೆ ಅನುಮತಿ ಕೊಟ್ಟಿರಿ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಪೊಲೀಸರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕಿಡಿ ಕಾರಿದ್ದು, ನಾವು ಸಂಜೆವರೆಗೂ ಇಲ್ಲಿಂದ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ. ಮುಸ್ಲಿಮರಿಗೆ ಏಕಾಏಕಿ ಬೈಕ್​ ರ‍್ಯಾಲಿಗೆ ಅವಕಾಶ ನೀಡಿದ್ದೀರಿ. ನಮಗೂ ರ‍್ಯಾಲಿಗೆ ಅವಕಾಶ ನೀಡಿ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

LEAVE A REPLY

Please enter your comment!
Please enter your name here