Home ಸುದ್ದಿಗಳು ಯಕೃತ್ ದಾನಮಾಡಲು ಹೋಗಿ ಜೀವ ಕಳೆದುಕೊಂಡ ಮಹಿಳೆ

ಯಕೃತ್ ದಾನಮಾಡಲು ಹೋಗಿ ಜೀವ ಕಳೆದುಕೊಂಡ ಮಹಿಳೆ

0
ಯಕೃತ್ ದಾನಮಾಡಲು ಹೋಗಿ ಜೀವ ಕಳೆದುಕೊಂಡ ಮಹಿಳೆ

ಉಡುಪಿ: ಯಕೃತ್ ದಾನ ಮಾಡಲು ಹೋಗಿ ಮಹಿಳೆಯೊಬ್ಬರು ಜೀವಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ನಡೆದಿದೆ.

ಅರ್ಚನಾ ಕಾಮತ್ (34) ಮೃತಪಟ್ಟವರು. ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದರು.

69 ವರ್ಷ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ  ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಮಾಡಿದ್ದರು.

ಬಳಿಕ ಅರ್ಚನಾ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕೆಲ ದಿನಗಳ ಬಳಿಕ ಜ್ವರ ಕಾಣಿಸಿಕೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಾವು ಸಂಭವಿಸಿದೆ.

ಮೃತರು ಪತಿ ಸಿಎ ಚೇತನ್ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here