Home ಸುದ್ದಿಗಳು ಒಡಿಶಾದಲ್ಲಿ ಸುಭದ್ರಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಒಡಿಶಾದಲ್ಲಿ ಸುಭದ್ರಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

0
ಒಡಿಶಾದಲ್ಲಿ ಸುಭದ್ರಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಒಡಿಶಾ: ಒಡಿಶಾ ಸರ್ಕಾರದ ಯೋಜನೆಗಳಲ್ಲಿ ಒಂದಾದ ಸುಭದ್ರಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಇದು ಒಡಿಶಾ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಪ್ರತಿ ವರ್ಷ 21 ರಿಂದ 60 ವರ್ಷ ವಯಸ್ಸಿನ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ರಾಜ್ಯ ಸರ್ಕಾರವು ಎರಡು ಕಂತುಗಳಲ್ಲಿ ವರ್ಷಕ್ಕೆ ಒಟ್ಟು ಹತ್ತು ಸಾವಿರ ರೂ. ನೀಡುತ್ತದೆ.

ಸುಭದ್ರಾ ಯೋಜನೆಯ ಸಮ್ಮಾನ್ ಮೊತ್ತದ ಕಂತನ್ನು ರಾಖಿ ಪೂರ್ಣಿಮಾ ಮತ್ತು ಮಹಿಳಾ ದಿನಾಚರಣೆಯಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು. ಒಡಿಶಾದ ಮಹಿಳೆಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.

ಸರ್ಕಾರಿ ಉದ್ಯೋಗ ಮಾಡುವ ಮತ್ತು ಆದಾಯ ತೆರಿಗೆ ಪಾವತಿಸುವ ಮಹಿಳೆಯರು ಈ ಯೋಜನೆಗೆ ಒಳಪಡುವುದಿಲ್ಲ. ಮಹಿಳೆಯು ಯಾವುದೇ ಇತರ ಸರ್ಕಾರಿ ಯೋಜನೆಗಳಿಂದ ಪ್ರತಿ ವರ್ಷ ರೂ 15,000 ಅಥವಾ ಅದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದರೆ, ಆಕೆಯನ್ನು ಈ ಯೋಜನೆಗೆ ಅನ್ವಯವಾಗುವುದಿಲ್ಲ.

ಸುಭದ್ರಾ ಯೋಜನೆಯು ಪ್ರಸಕ್ತ ಹಣಕಾಸು ವರ್ಷ 2024-25 ರಿಂದ 2028-29 ರ ಆರ್ಥಿಕ ವರ್ಷಕ್ಕೆ ಅನ್ವಯಿಸುತ್ತದೆ. ಈ ಯೋಜನೆಗೆ ಸಚಿವ ಸಂಪುಟವು 55825 ಕೋಟಿ ರೂ. ಮೀಸಲಿಟ್ಟಿದೆ.

 

LEAVE A REPLY

Please enter your comment!
Please enter your name here