
ಉಡುಪಿ: ಕಸ್ತೂರಿ ರಂಗನ್ ವರದಿಯ ಜಾರಿ ಬಗ್ಗೆ ರಾಜ್ಯ ಸರಕಾರ ಈ ಹಿಂದೆ ಕಳುಹಿಸಿದ 5 ವರದಿಗಳನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದು, ಈಗ ಪುನಃ ವರದಿಯನ್ನು ಕೇಳಿದೆ. ಈ ವರದಿ ಜಾರಿಯಾದಲ್ಲಿ, ಸ್ಥಳೀಯ ಕಾರ್ಕಳದ ಕೃಷಿಕರು, ಶ್ರಮಿಕರು, ಬಡ ಜನರ ಜೀವನ ದುಸ್ತರವಾಗುತ್ತದೆ. ಆದ್ದರಿಂದ ಜೀವತೆತ್ತಾದರೂ ಈ ವರದಿ ಜಾರಿಯಾಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಸ್ತೂರಿರಂಗನ್ ವರದಿ ಜಾರಿಯಾದರೆ ತಪ್ಪಲು ಭಾಗದ ಜನರಿಗೆ ಭಾರೀ ಸಮಸ್ಯೆ ಆಗುತ್ತೆ. ಹೀಗಾಗಿ ವರದಿ ಜಾರಿ ವಿರುದ್ದ ಶೀಘ್ರವೇ ಈದುವಿನಿಂದ ಸೋಮೇಶ್ವರದವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
