Home ಸುದ್ದಿಗಳು ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಪತ್ತೆ

ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಪತ್ತೆ

0
ಉತ್ತರಾಖಂಡದಲ್ಲಿ ರೈಲು ಹಳಿ ತಪ್ಪಿಸುವ ಯತ್ನ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಪತ್ತೆ

ಉತ್ತರಾಖಂಡ: ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇರಿಸಿ ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ ಘಟನೆ ಉತ್ತರಾಖಂಡದ ಬಿಲಾಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದ ರೈಲ್ವೆ ಹಳಿಯಲ್ಲಿ ನಡೆದಿದೆ.

ಲೋಕೊ ಪೈಲಟ್ ಈ ಕಂಬವನ್ನು ನೋಡಿ ಬ್ರೇಕ್ ಹಾಕಿದ್ದಾರೆ, ಇಲ್ಲದಿದ್ದರೆ ದೊಡ್ಡ ರೈಲು ಅಪಘಾತ ಸಂಭವಿಸುತ್ತಿತ್ತು. ರೈಲ್ವೆ ಅಧಿಕಾರಿಗಳು, ಪೊಲೀಸರು ಮತ್ತು ಜಿಆರ್‌ಪಿ ಸ್ಥಳಕ್ಕೆ ಆಗಮಿಸಿ ಪಿಲ್ಲರ್ ಅನ್ನು ಹಳಿಯಿಂದ ತೆಗೆದು ರೈಲನ್ನು ಕಳುಹಿಸಿದ್ದಾರೆ.

ರೈಲು ಸುಮಾರು 20 ನಿಮಿಷ ತಡವಾಗಿ ಪ್ರಯಾಣ ಆರಂಭಿಸಿತು. ಈ ಘಟನೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ. ರೈಲ್ವೆ ಸಚಿವಾಲಯವೂ ವರದಿಯನ್ನು ಕೇಳಿದೆ.

ಇನ್ನು ಹಲವು ಘಟನೆಗಳು ನಡೆದಿದ್ದವು: ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್‌ ಅನ್ನು ಇರಿಸಿ, ಕಾಳಿಂದಿ ಎಕ್ಸ್‌ಪ್ರೆಸ್‌ ರೈಲನ್ನು ಹಳಿ ತಪ್ಪಿಸುವ ಪ್ರಯತ್ನವನ್ನು ದುಷ್ಕರ್ಮಿಗಳು ನಡೆಸಿದ್ದರು.

ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್‌ ಬ್ಲಾಕ್‌ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದರು.

ಅಜ್ಮೀರ್​ನ ಪಶ್ಚಿಮ ಮೀಸಲು ಸರಕು ಸಾಗಣೆ ಕಾರಿಡಾರ್‌ನ ರೈಲು ಹಳಿಗಳ ಮೇಲೆ ದೊಡ್ಡ ಗಾತ್ರದ ಎರಡು ಸಿಮೆಂಟ್‌ ಬ್ಲಾಕ್‌ಗಳು ಪತ್ತೆಯಾಗಿದ್ದವು.

 

LEAVE A REPLY

Please enter your comment!
Please enter your name here