Home ಸುದ್ದಿಗಳು ರಾಜ್ಯ ರಾಜಧಾನಿಯಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್

ರಾಜ್ಯ ರಾಜಧಾನಿಯಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್

0
ರಾಜ್ಯ ರಾಜಧಾನಿಯಲ್ಲಿ ನಿಫಾ ಆತಂಕ: 41 ಜನರಿಗೆ ಹೋಮ್ ಕ್ವಾರಂಟೈನ್

ಬೆಂಗಳೂರು: ಇದೀಗ ಬೆಂಗಳೂರಿನಲ್ಲಿ ನಿಫಾ ಜೊತೆಗೆ ಮಂಕಿಪಾಕ್ಸ್ ಆತಂಕ ಶುರುವಾಗಿದೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ‌ ಐಸೊಲೇಷನ್ ಮಾಡಲಾಗಿದೆ.

41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ‌ ಐಸೊಲೇಷನ್ ಮಾಡಲಾಗಿದೆ. 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಸದ್ಯ ಕೋವಿಡ್​ನಲ್ಲಿ ಭಯ ಹುಟ್ಟಿಸಿದ್ದ ಕ್ವಾರಂಟೈನ್ ಈಗ ಮತ್ತೆ ನಿಫಾ ಹೆಸರಲ್ಲಿ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಬಿ ಅಲರ್ಟ್ ಅಂತಿದ್ದಾರೆ.

 

LEAVE A REPLY

Please enter your comment!
Please enter your name here