Home ಸುದ್ದಿಗಳು ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

0
ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಹಾಸನ‌ ಜಿಲ್ಲೆ ಚನ್ನರಾಯಪಟ್ಟಣದ  ಹಿರಿಯ ಪತ್ರಕರ್ತ ಟಿ.ಜಿ.ಹೇಮಕುಮಾರ್ ಅವರ ನಿಧನದಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.

ಜ್ಞಾನ ದೀಪ, ಜನಮಿತ್ರ, ಹಾಸನ‌ಮಿತ್ರ, ನಾಡಸಹ್ಯಾದ್ರಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ಹೇಮಕುಮಾರ್ ಅವರಿಗೆ ಪತ್ನಿ ಮತ್ತು ಮಗಳಿದ್ದಾರೆ.

ಅಪ್ಪನ ಸಾವಿನ ಬಳಿಕ ಕುಟುಂಬ ನಿರ್ವಹಣೆಗಾಗಿ ಅದೇ ವೃತ್ತಿಯನ್ನು (ಪತ್ರಿಕೆ ಹಾಕುವುದು‌ ಸೇರಿ) ಪುತ್ರಿ ವಿದ್ಯಾ ಮುಂದುವರಿಸಿದ್ದಾರೆ.

 

LEAVE A REPLY

Please enter your comment!
Please enter your name here