Home ಸುದ್ದಿಗಳು ಸನ್ಮಾನಕ್ಕಾಗಿ ರೈಲು ಹಳಿಯ ಬೋಲ್ಟ್​ ಸಡಿಲಗೊಳಿಸಿದ ರೈಲ್ವೆ ಸಿಬ್ಬಂದಿಯ ಬಂಧನ

ಸನ್ಮಾನಕ್ಕಾಗಿ ರೈಲು ಹಳಿಯ ಬೋಲ್ಟ್​ ಸಡಿಲಗೊಳಿಸಿದ ರೈಲ್ವೆ ಸಿಬ್ಬಂದಿಯ ಬಂಧನ

0
ಸನ್ಮಾನಕ್ಕಾಗಿ ರೈಲು ಹಳಿಯ ಬೋಲ್ಟ್​ ಸಡಿಲಗೊಳಿಸಿದ ರೈಲ್ವೆ ಸಿಬ್ಬಂದಿಯ ಬಂಧನ

ಗುಜರಾತ್: ಸೂರತ್ ಜಿಲ್ಲೆಯಲ್ಲಿ ರೈಲ್ವೆ ಸಿಬ್ಬಂದಿಗಳನ್ನು ಹಳಿಗಳನ್ನು ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಿದ ಘಟನೆ ನಡೆದಿದೆ.

ರೈಲು ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಇಲಾಖೆಯವರಿಗೆ ತಿಳಿಸಿದರೆ ತಮ್ಮನ್ನು ಸನ್ಮಾನಿಸುತ್ತಾರೆ ಎಂದು ಭಾವಿಸಿ ಈ ಕೃತ್ಯವೆಸಗಿದ್ದಾರೆ.

ಸುಭಾಷ್ ಪೊದ್ದಾರ್ (39), ಮನೀಶ್ ಮಿಸ್ತ್ರಿ (28) ಮತ್ತು ಶುಭಂ ಜೈಸ್ವಾಲ್ (26) ಎಂಬ ಮೂವರು ಉದ್ಯೋಗಿಗಳು ರೈಲ್ವೆಯ ನಿರ್ವಹಣಾ ವಿಭಾಗದಲ್ಲಿ ಟ್ರ್ಯಾಕ್‌ಮೆನ್‌ಗಳಾಗಿದ್ದು ಮೂವರನ್ನೂ ಬಂಧಿಸಲಾಗಿದೆ.

ಸೆಪ್ಟೆಂಬರ್ 21 ರಂದು ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಿ ಮತ್ತು ಹಲವಾರು ಬೋಲ್ಟ್‌ಗಳನ್ನು ಸಡಿಲಗೊಳಿಸಿ ರೈಲ್ವೆ ಹಳಿಯನ್ನು ಹಾಳು ಮಾಡಿದ್ದಾರೆ ಎಂದು ಸೂರತ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

5.30 ರ ಸುಮಾರಿಗೆ ಆರೋಪಿಗಳು ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸುವ ಮೊದಲು ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದರು.

ಚಿತ್ರೀಕರಿಸಿದ ಫೋಟೋಗಳು ಮತ್ತು ವೀಡಿಯೊಗಳ ಸಮಯವನ್ನು ಗಮನಿಸಲಾಗಿದ್ದು ಇವುಗಳ ಸಮಯದ ಅಂತರದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ನಂತರ ಮೂವರು ಟ್ರಾಕ್‌ಮೆನ್‌ಗಳು ತೀವ್ರ ವಿಚಾರಣೆಯ ನಡೆಸಿದ ನಂತರ ಅಪರಾಧವನ್ನು ಒಪ್ಪಿಕೊಂಡರು ಎನ್ನಲಾಗಿದೆ.

ಇಲಾಖೆಯಿಂದ ಸನ್ಮಾನ ಸಿಗುವುದು ಹಾಗೂ ರಾತ್ರಿ ಪಾಳಿಯಲ್ಲಿರುವವರು ಮರುದಿನ ಒಂದು ದಿನ ರಜೆ ಪಡೆಯುತ್ತಾರೆ ಹೀಗಾಗಿ ಇದೇ ಶಿಫ್ಟ್​ನಲ್ಲಿ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here