Home ಸುದ್ದಿಗಳು ಆಹಾರದಲ್ಲಿ ಉಗುಳು, ಮೂತ್ರ ಬೆರಕೆ: ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಕಡ್ಡಾಯಗೊಳಿಸಿದ ಯೋಗಿ

ಆಹಾರದಲ್ಲಿ ಉಗುಳು, ಮೂತ್ರ ಬೆರಕೆ: ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಕಡ್ಡಾಯಗೊಳಿಸಿದ ಯೋಗಿ

0
ಆಹಾರದಲ್ಲಿ ಉಗುಳು, ಮೂತ್ರ ಬೆರಕೆ: ಆಹಾರ ಕೇಂದ್ರಗಳಲ್ಲಿ ಮಾಲೀಕರ ಹೆಸರು ಕಡ್ಡಾಯಗೊಳಿಸಿದ ಯೋಗಿ

ಲಕ್ನೋ: ಆಹಾರ ಕೇಂದ್ರಗಳಲ್ಲಿ ನಿರ್ವಾಹಕರು, ಮಾಲೀಕರು, ವ್ಯವಸ್ಥಾಪಕರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌  ಸೂಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಉಗುಳುವುದು, ಮೂತ್ರ ಬೆರೆಸುವ ಘಟನೆಗಳು ನಡೆಯುತ್ತಿದ್ದು ಇದನ್ನು ಮನಗಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸೆ.12 ರಂದು, ಸಹರಾನ್‌ಪುರ ಜಿಲ್ಲೆಯ ಉಪಾಹಾರ ಗೃಹದಲ್ಲಿ ಹದಿಹರೆಯದವರು ರೊಟ್ಟಿಗಳನ್ನು ತಯಾರಿಸುವಾಗ ಉಗುಳುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಕಳೆದ ವಾರ, ಗಾಜಿಯಾಬಾದ್ ಜಿಲ್ಲೆಯ ಜ್ಯೂಸ್ ಮಾರಾಟಗಾರನೊಬ್ಬ ಗ್ರಾಹಕರಿಗೆ ಮೂತ್ರದೊಂದಿಗೆ ಬೆರೆಸಿದ ಹಣ್ಣಿನ ರಸವನ್ನು ನೀಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು.

ಈ ರೀತಿಯ ಘಟನೆಗಳು ಮರುಕಳಿಸುತಿದ್ದು ಹೀಗಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಬಾಣಸಿಗರು ಮತ್ತು ಪರಿಚಾರಕರು ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು. ಜೊತೆಗೆ ಎಂದು ಸಿಎಂ ತಿಳಿಸಿದ್ದಾರೆ.

ಆಹಾರ ಪದಾರ್ಥಗಳಲ್ಲಿ ಮಾನವ ತ್ಯಾಜ್ಯವನ್ನು ಬೆರೆಸುವುದು ಅಸಹ್ಯಕರವಾಗಿದೆ. ಆಹಾರ ಪದಾರ್ಥಗಳನ್ನು ಮಾನವ ತ್ಯಾಜ್ಯ ಅಥವಾ ಕೊಳಕು ಪದಾರ್ಥಗಳೊಂದಿಗೆ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

 

LEAVE A REPLY

Please enter your comment!
Please enter your name here