Home ಸುದ್ದಿಗಳು ಥೈಲ್ಯಾಂಡ್: ಶಾಲಾ ಬಸ್ ಗೆ ​ ಬೆಂಕಿ ತಗುಲಿ 25 ವಿದ್ಯಾರ್ಥಿಗಳ ಸಜೀವ ದಹನ

ಥೈಲ್ಯಾಂಡ್: ಶಾಲಾ ಬಸ್ ಗೆ ​ ಬೆಂಕಿ ತಗುಲಿ 25 ವಿದ್ಯಾರ್ಥಿಗಳ ಸಜೀವ ದಹನ

0
ಥೈಲ್ಯಾಂಡ್: ಶಾಲಾ ಬಸ್ ಗೆ ​ ಬೆಂಕಿ ತಗುಲಿ 25 ವಿದ್ಯಾರ್ಥಿಗಳ ಸಜೀವ ದಹನ

ಥೈಲ್ಯಾಂಡ್: ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಗೆ ​ಬೆಂಕಿ ತಗುಲಿದ ಪರಿಣಾಮ 25 ವಿದ್ಯಾರ್ಥಿಗಳು ಸಜೀವ ದಹನವಾದ ಘಟನೆ ನಡೆದಿದೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ 12.30 ರ ಸುಮಾರಿಗೆ ಥೈಲ್ಯಾಂಡ್​ನ ರಂಗ್‌ಸಿಟ್ ಶಾಪಿಂಗ್ ಮಾಲ್ ಬಳಿಯ ಫಾಹೋನ್ ಯೋಥಿನ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ.

ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗ ಹೆಚ್ಚಿನ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಬದುಕುಳಿದವರ ಸಂಖ್ಯೆಯನ್ನು ಆಧರಿಸಿ, 25 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಲಾನ್ ಸಕ್ ಜಿಲ್ಲೆಯ ವಾಟ್ ಖಾವೊ ಪ್ರಾಯ ಸಂಘರಮ್‌ನಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸದಲ್ಲಿ ಆರು ಶಿಕ್ಷಕರು ಸಹ ಭಾಗವಹಿಸಿದ್ದರು. ಅವರ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಡೀ ಬಸ್ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ.

 

LEAVE A REPLY

Please enter your comment!
Please enter your name here