Home ಸುದ್ದಿಗಳು ದೇಶದಲ್ಲಿ ಗ್ರಾಮ್​ಗೆ 50 ರೂನಷ್ಟು ಹೆಚ್ಚಳ ಕಂಡ ಚಿನ್ನ: ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿಕೆ

ದೇಶದಲ್ಲಿ ಗ್ರಾಮ್​ಗೆ 50 ರೂನಷ್ಟು ಹೆಚ್ಚಳ ಕಂಡ ಚಿನ್ನ: ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿಕೆ

Gold saw an increase of Rs 50 per gram in the country: silver prices continued to remain unchanged

ಬೆಂಗಳೂರು: ವಿದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿ ಇದ್ದರೂ ಭಾರತದಲ್ಲಿ ಇಂದು ಹೆಚ್ಚಳ ಕಂಡಿದೆ. ಇಂದು ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,000 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,450 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 71,000 ರೂ, ಚೆನ್ನೈ: 71,000 ರೂ, ಮುಂಬೈ: 71,000 ರೂ, ದೆಹಲಿ: 71,150 ರೂ, ಕೋಲ್ಕತಾ: 71,000 ರೂ, ಕೇರಳ: 71,000 ರೂ, ಅಹ್ಮದಾಬಾದ್: 71,050 ರೂ, ಜೈಪುರ್: 71,150 ರೂ,ಲಕ್ನೋ: 71,150 ರೂ, ಭುವನೇಶ್ವರ್: 71,000 ರೂ ಆಗಿದೆ.

 
Previous articleಇಸ್ರೇಲ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ: 8 ಜನರ ಸಾವು
Next articleಹೆಣ್ಣುಮಗು ಹುಟ್ಟಿದೆ ಎಂದು ಹೇಳಿ ಸತ್ತ ಗಂಡು ಮಗುವಿನ ಶವ ಕೊಟ್ಟ ಆಸ್ಪತ್ರೆ ಸಿಬ್ಬಂದಿ