Home ಸುದ್ದಿಗಳು ಜಪಾನ್‍: 2ನೇ ಮಹಾಯುದ್ದದ ಕಾಲದ ಬಾಂಬ್ ಸ್ಫೋಟ

ಜಪಾನ್‍: 2ನೇ ಮಹಾಯುದ್ದದ ಕಾಲದ ಬಾಂಬ್ ಸ್ಫೋಟ

0
ಜಪಾನ್‍: 2ನೇ ಮಹಾಯುದ್ದದ ಕಾಲದ ಬಾಂಬ್ ಸ್ಫೋಟ

ಟೋಕಿಯೋ: 2ನೇ ಮಹಾಯುದ್ದದ ಕಾಲದ ಬಾಂಬ್ ಈಗ ಸ್ಫೋಟಗೊಂಡ ಘಟನೆ ಜಪಾನ್‍ನ ಮಿಯಾಜಾಕಿ ವಿಮಾನ ನಿಲ್ದಾಣದಲ್ಲಿ ರನ್‍ವೇ ಬಳಿ ನಡೆದಿದೆ.

ಈ ಸ್ಫೋಟದಿಂದಾಗಿ 87 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಯುದ್ಧ ನಡೆದ ಕಾಲದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಸ್ಫೋಟಗೊಳ್ಳದ ಬಾಂಬ್‍ಗಳನ್ನು ಬಾಂಬ್ ವಿಲೇವಾರಿ ತಂಡ ನೆಲದಲ್ಲಿ ಹೂತು ಹಾಕಿತ್ತು. ಅದು ಈಗ ಸ್ಫೋಟಗೊಂಡಿದೆ ಎಂದು ಜಪಾನ್‍ನ ಸಾರಿಗೆ ಸಚಿವಾಲಯ ದೃಢಪಡಿಸಿದೆ.

ಸ್ಫೋಟವು ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿಯನ್ನು ಸೃಷ್ಟಿಸಿದೆ. ಇದರಿಂದ ಅಧಿಕಾರಿಗಳು ರನ್‍ವೇಯನ್ನು ಮುಚ್ಚಲು ಆದೇಶಿಸಿದರು.

ಹಠಾತ್ ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಯುದ್ಧ ನಡೆದು 79 ವರ್ಷಗಳಾಗಿದ್ದರು, ಹಲವು ಬಾಂಬ್‍ಗಳು ಪತ್ತೆಯಾಗುತ್ತಿವೆ. ಈ ಹಿಂದೆ ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಸ್ಫೋಟಿಸದ ಬಾಂಬ್‍ಗಳು ಪತ್ತೆಯಾಗಿವೆ.

 

LEAVE A REPLY

Please enter your comment!
Please enter your name here