Home ಸುದ್ದಿಗಳು ಮಂಗಳೂರು: ಸಿಸಿಬಿ ಪೊಲೀಸರಿಂದ 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಮಂಗಳೂರು: ಸಿಸಿಬಿ ಪೊಲೀಸರಿಂದ 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

0
ಮಂಗಳೂರು: ಸಿಸಿಬಿ ಪೊಲೀಸರಿಂದ 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು 6 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯನ್‌ ಪ್ರಜೆ ಪೀಟರ್ ಇಕೇಡಿ ಬೆಲೊನುನನ್ನ ಬಂಧಿಸಲಾಗಿದೆ.

ಕದ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪೆಡ್ಲರ್ ಹೈದರಾಲಿ ಎಂಬಾತನನ್ನು ವಿಚಾರಣೆ ನಡೆಸಿದ ಪೊಲೀಸರು, ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ? ಅನ್ನೋ ಬಗ್ಗೆ ಶೋಧ ನಡೆಸಿದಾಗ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ಗೊತ್ತಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನೈಜೀರಿಯಾ ಪ್ರಜೆ ಪೀಟರ್ ಇಕೇಡಿ ಬೆಲೊನು ಸಿಕ್ಕಿಬಿದ್ದಿದ್ದಾನೆ.

ಈತ ಬೆಂಗಳೂರಿನ ವಿವೇಕಾನಂದ ನಗರದಲ್ಲಿ 6 ಕೆಜಿ 300 ಗ್ರಾಂನಷ್ಟು ಡ್ರಗ್ಸ್ ಸ್ಟಾಕ್ ಇಟ್ಟಿದ್ದ, ಅವಧಿ ಮೀರಿದ ವೀಸಾ ಹೊಂದಿದ್ದು, ಅಕ್ರಮವಾಗಿ ನೆಲೆಸಿದ್ದ ಅನ್ನೋದು ಈ ವೇಳೆ ಗೊತ್ತಾಗಿದೆ. ಕೂಡಲೇ ಆತನನ್ನ ಬಂಧಿಸಿ, ಡ್ರಗ್ಸ್‌ಅನ್ನು ಜಪ್ತಿ ಮಾಡಿದ್ದಾರೆ.

ಈತ ಬೆಂಗಳೂರು ನಗರದಿಂದ, ಕರ್ನಾಟಕದ ವಿವಿಧ ಭಾಗಗಳಿಗೆ ಹಾಗೂ ಬೆಂಗಳೂರು ಮೂಲಕ ಕೇರಳಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

 

LEAVE A REPLY

Please enter your comment!
Please enter your name here