Home ಸುದ್ದಿಗಳು ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಹಿಳೆಯ ಬಂಧನ

ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಹಿಳೆಯ ಬಂಧನ

0
ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಮಹಿಳೆಯ ಬಂಧನ

ಮಂಗಳೂರು: ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಕೇರಳಕ್ಕೆ ಪರಾರಿಯಾಗಿದ್ದ ಪ್ರಕರಣದ A1 ಆರೋಪಿ ಆಯಿಷಾ ರೆಹಮತ್ ಬಂಧನಕ್ಕೊಳಗಾದ ಮಹಿಳೆ.

ಈಕೆಯ ಜೊತೆ ಪ್ರಕರಣದ A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ರೆಹಮತ್‌ನನ್ನು ಬಂಟ್ವಾಳದ ಕಲ್ಲಡ್ಕ ಬಳಿ ಬಂಧಿಸಲಾಯಿತು.

ಏನಿದು ಘಟನೆ: ಮುಮ್ತಾಜ್ ಅಲಿ ಆತ್ಮಹತ್ಯೆ ಹಿಂದೆ ಆಯಿಷಾ ರೆಹಮತ್ ಕೈವಾಡ ಇದೆ ಎಂದು ತಿಳಿದು ಬಂದಿತ್ತು.

ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ಈ ವಿಚಾರ ಮುಮ್ತಾಜ್​ ಅಲಿ ಮನೆಯವರಿಗೆ ಗೊತ್ತಾಗಿ ನಿತ್ಯ ಕಿರಿಕಿರಿಯಾಗುತ್ತಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ‌.

ಪ್ರಕರಣ ಪ್ರಮುಖ ಮಾಸ್ಟರ್‌ಮೈಂಡ್ A2 ಆರೋಪಿ ಅಬ್ದುಲ್ ಸತ್ತಾರ್‌ಗಾಗಿ ಮಂಗಳೂರು ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here