
ಬೆಳ್ತಂಗಡಿ: ಕಳೆದ ವಾರದಿಂದ ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು,ನಿನ್ನೆ ಕೂಡ ಏಕಾಏಕಿ ಭಾರೀ ಮಳೆ ಸುರಿದಿದೆ.
ಈ ಕಾರಣದಿಂದಾಗಿ ಮೃತ್ಯುಂಜಯ ಹಾಗೂ ದಿಡುಪೆ ಕಡೆಯಿಂದ ಹರಿಯುವ ನೇತ್ರಾವತಿ ನದಿಯಲ್ಲಿ ಮಂಗಳವಾರ ಸಂಜೆ ನೀರಿನ ಮಟ್ಟ ಒಮ್ಮೆಲೆ ಏರಿಕೆ ಕಂಡುಬಂದಿತ್ತು.
ನೀರು ಏರಿಕೆಯಾಗಿ ಹಲವು ಸಣ್ಣ ಸೇತುವೆಗಳು ಮುಳುಗಡೆ ಯಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ರಾತ್ರಿ 9ಗಂಟೆಯ ವರೆಗೂ ಏರಿಕೆ ಕಂಡಿದ್ದು ಬಳಿಕ ಇಳಿಕೆಯಾಗ ತೊಡಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಲ್ಲೋ ಅಲರ್ಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅ. 9ರಂದು ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
