
ನವರಾತ್ರಿ ಹಬ್ಬವು ಹಿಂದೂಧರ್ಮದಲ್ಲಿ ಅತ್ಯಂತ ಪ್ರಮುಖವಾದ ಹಬ್ಬಗಳಲ್ಲಿ ಒಂದಾಗಿದೆ, ಮತ್ತು ಇದು ದೆವಿ ದುರ್ಗೆಯ ಆರಾಧನೆಗೆ ಸಮರ್ಪಿತವಾಗಿರುತ್ತದೆ. ನವರಾತ್ರಿಯಲ್ಲಿನ ಎಂಟನೇ ದಿನ ದೇವಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ.
ಮಹಾಗೌರಿ ದೇವಿ ದುರ್ಗೆಯ ಅವತಾರಗಳಲ್ಲಿ ಒಂದು. ಈ ದೇವಿಯು ವಿಶೇಷವಾಗಿ ಶಾಂತ, ಕೋಮಲ, ಮತ್ತು ಶುದ್ಧತೆಯನ್ನು ಪ್ರತಿನಿಧಿರುತ್ತಾಳೆ. ದೇವಿಯ ಮೈಬಣ್ಣವು ಶುದ್ಧ ಶ್ವೇತವರ್ಣದಾಗಿದ್ದು, ರೂಪವು ತುಂಬಾ ಮನೋಹರವಾಗಿದೆ. ಮಹಾಗೌರಿಯ ಹೆಸರು ಸ್ವತಃ ಬಿಳುಪನ್ನು ಸೂಚಿಸುತ್ತದೆ, ಅಂದರೆ ಶ್ವೇತವರ್ಣದವಳು ಅಥವಾ ಶುದ್ಧತೆಯನ್ನು ಪ್ರತಿನಿಧಿಸುವವಳು.
ಮಹಾಗೌರಿಯ ಕಥೆ: ಪುರಾಣಗಳ ಪ್ರಕಾರ, ಪಾರ್ವತಿ ದೇವಿ ಶಿವನನ್ನು ಪತಿಯಾಗಿ ಪಡೆಯಲು ಕಠಿಣ ತಪಸ್ಸು ಮಾಡಿದಳು. ಈ ತಪಸ್ಸು ಅತ್ಯಂತ ಕಠಿಣವಾಗಿದ್ದು, ಇದರಿಂದ ಪಾರ್ವತಿಯ ಮೈಬಣ್ಣ ಕಪ್ಪಾಗಿಹೊಗುತ್ತದೆ. ಶಿವನು ಪಾರ್ವತಿಯ ಈ ತಪಸ್ಸುಗಳಿಂದ ತೃಪ್ತನಾಗಿ, ದೇವಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಶಿವನ ಆಶೀರ್ವಾದದಿಂದ ಪಾರ್ವತಿ ದೇವಿಯ ಕಪ್ಪಾದ ಮೈಬಣ್ಣವು ತೊಳೆದು ಹೋಗಿ ಶ್ವೇತವಾದ ಮೈಬಣ್ಣವನ್ನು ಪಡೆದುಕೊಳ್ಳುತ್ತಾಳೆ. ಇದರಿಂದ ಆಕೆ ‘ಮಹಾಗೌರಿ’ ಎಂಬ ಹೆಸರು ಪಡೆದುಕೊಂಡಳು.
ಮಹಾಗೌರಿಯು ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರುವಳು ಎಂದು ನಂಬಲಾಗುತ್ತದೆ. ಇವರ ಆರಾಧನೆ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಶುದ್ಧ ಮನಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.
ಮಹಾಗೌರಿಯ ಚಿಹ್ನೆಗಳು: ಮಹಾಗೌರಿ ದೇವು ಚತುರ್ಭುಜ ಧಾರಿ, ಅಂದರೆ ನಾಲ್ಕು ಕೈಗಳಿದ್ದು, ಒಂದು ಕೈಯಲ್ಲಿ ತ್ರಿಶೂಲವನ್ನು, ಮತ್ತೊಂದು ಕೈಯಲ್ಲಿ ಡಮರು ಹಾಗೂ ಇತರ ಎರಡು ಕೈಗಳು ಆಶೀರ್ವಾದ ಮತ್ತು ಕರುಣೆಯನ್ನು ಸೂಚಿಸುತ್ತವೆ.
ಪೂಜೆ ಮತ್ತು ಮಹತ್ವ: ಮಹಾಗೌರಿಯ ಪೂಜೆಯನ್ನು ನವರಾತ್ರಿಯ ಎಂಟನೇ ದಿನ (ಅಷ್ಟಮಿ) ದಿನ ಪೂಜಿಸುತ್ತಾರೆ. ಈ ದಿನ ಮಹಾಗೌರಿಯ ದರ್ಶನದಿಂದ ಎಲ್ಲ ಕಷ್ಟಗಳು ನಿವಾರಣೆಯಾಗುತ್ತವೆ, ನವ ಜೀವನಕ್ಕೆ ಶ್ರೇಷ್ಠತೆಯ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗುತ್ತದೆ.
