
ಬೆಂಗಳೂರು: ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ.
ಚಿನ್ನದ ಬೆಲೆ ಇಂದು ಗ್ರಾಮ್ಗೆ 70 ರೂನಷ್ಟು ಭರ್ಜರಿ ಹೆಚ್ಚಳ ಕಂಡಿದೆ.
ಬೆಳ್ಳಿ ಬೆಲೆ ಇಂದು ಗ್ರಾಮ್ಗೆ ಎರಡು ರೂನಷ್ಟು ಏರಿಕೆ ಆಗಿದೆ. 94 ಮತ್ತು 100 ರೂ ಇದ್ದ ಬೆಳ್ಳಿ ಬೆಲೆ 96 ಮತ್ತು 102 ರೂಗೆ ಏರಿಕೆ ಆಗಿದೆ.
ಚಿನ್ನದ ಬೆಲೆ ವಿದೇಶದ ಮಾರುಕಟ್ಟೆಗಳ ಪೈಕಿ ದುಬೈ, ಶಾರ್ಜಾ ಇತ್ಯಾದಿ ಕಡೆ ಬಿಟ್ಟರೆ ಉಳಿದೆಡೆ ಹೆಚ್ಚಿನ ವ್ಯತ್ಯಯವಾಗಿಲ್ಲ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 70,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 77,400 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರುಪಾಯಿ ಇದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 70,950 ರೂ, ಚೆನ್ನೈ: 70,950 ರೂ, ಮುಂಬೈ: 70,950 ರೂ, ದೆಹಲಿ: 71,200 ರೂ, ಕೋಲ್ಕತಾ: 70,950 ರೂ, ಕೇರಳ: 70,950 ರೂ, ಅಹ್ಮದಾಬಾದ್: 71,100 ರೂ, ಜೈಪುರ್: 71,200 ರೂ, ಲಕ್ನೋ: 71,200 ರೂ, ಭುವನೇಶ್ವರ್: 70,950 ರೂ ಇದೆ.
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.
