Home ಸುದ್ದಿಗಳು ಹಳೆಯಂಗಡಿಯ ರಸ್ತೆಯುದ್ದಕ್ಕೂ ತುಂಬಿದೆ ಹೊಂಡ ಗುಂಡಿ

ಹಳೆಯಂಗಡಿಯ ರಸ್ತೆಯುದ್ದಕ್ಕೂ ತುಂಬಿದೆ ಹೊಂಡ ಗುಂಡಿ

0
ಹಳೆಯಂಗಡಿಯ ರಸ್ತೆಯುದ್ದಕ್ಕೂ ತುಂಬಿದೆ ಹೊಂಡ ಗುಂಡಿ

ಕಿನ್ನಿಗೋಳಿ: ಸರಿಯಾದ ಚರಂಡಿ ವ್ಯವಸ್ಯೆ ಇಲ್ಲದೆ, ಕೋಡಿಯಿಂದ ಪಕ್ಷಿಕೆರೆ ಹಳೆಯಂಗಡಿಯ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ದ್ವಿಚಕ್ರ ವಾಹನ ಸವಾರರು ಪರದಾಡಿಕೊಂಡು ಹೋಗುವ ಸ್ಥಿತಿ ಎದುರಾಗಿದೆ.

ಹಲವು ಕಡೆಗಳಲ್ಲಿ ಐಸಿವೈಮ್‌ ಸಂಘಟನೆಯ ಮೂಲಕ ಆಗಸ್ಟ್‌ ನಲ್ಲಿ ಶ್ರಮದಾನ ಮಾಡಿ ದೊಡ್ಡ ಹೊಂಡಗಳಿಗೆ ಜಲ್ಲಿ ಹಾಕಿ ಮುಚ್ಚಲಾಗಿತ್ತು. ಈಗ ಹೊಂಡ ಗಳು ಮತ್ತೆ ಕಾಣಿಸಿಕೊಂಡು ಸಮಸ್ಯೆಯಾಗಿದೆ.

ಕೊಯಿಕುಡೆ ಪರಿಸರದಲ್ಲಿ ಅಪಾಯಕಾರಿ ತಿರುವು ಇರುವಲ್ಲಿ ದೊಡ್ಡ ಹೊಂಡ ಗುಂಡಿಗಳು ಸೃಷ್ಟಿಯಾಗಿವೆ. ರಸ್ತೆ ಬದಿಯ ಹುಲ್ಲು ಗಿಡಿ ಕಂಟಿಗಳಿಂದ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಅಪಘಾತ ಉಂಟಾಗುವ ಸಾಧ್ಯತೆ ಇವೆ.

 

LEAVE A REPLY

Please enter your comment!
Please enter your name here