Home ಸುದ್ದಿಗಳು ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ: ಬಜರಂಗ ದಳದ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ: ಬಜರಂಗ ದಳದ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

0
ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ: ಬಜರಂಗ ದಳದ ಕಾರ್ಯಕರ್ತರಿಂದ ಪೊಲೀಸರಿಗೆ ಮಾಹಿತಿ

ವಿಟ್ಲ: ಕೇರಳಕ್ಕೆ ವಾಹನದ ಮೂಲಕ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಘಟನೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ಮಾಣಿಲದ ಬಜರಂಗ ದಳ ಕಾರ್ಯಕರ್ತರು ಜಾನುವಾರು ಸಾಗಾಟವನ್ನು ತಡೆ ಹಿಡಿದು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದು ಪೊಲೀಸರು ತನಿಖೆ ನಡೆಸಿದಾಗ ಎರಡು ಜಾನುವಾರುಗಳನ್ನು ವ್ಯಕ್ತಿಯೊಬ್ಬರು ಮಾರಾಟ ಮಾಡಿದ್ದು, ಆ ಜಾನುವಾರುಗಳನ್ನು ಸಾಕುವ ಉದ್ದೇಶದಿಂದ ಖರೀದಿಸಿದ್ದಾರೆಂದು ತಿಳಿದು ಬಂದಿತ್ತು.

ಆದರೆ ಸಾಗಾಟಕ್ಕೆ ಸೂಕ್ತ ಅನುಮತಿ ಪತ್ರ ಇರದ ಕಾರಣ ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರುಗಳನ್ನು ಮತ್ತೆ ಕಳುಹಿಸಲಾಯಿತು.

ಕಾನೂನಾತ್ಮಕವಾಗಿ ಸಂಪೂರ್ಣ ದಾಖಲೆಯೊಂದಿಗೆ ವಾಹನದಲ್ಲಿ ಸಾಗಾಟ ಮಾಡಲು ವಿಟ್ಲ ಪೊಲೀಸರು ಸೂಚನೆ ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here