Home ಸುದ್ದಿಗಳು ಸಿಟಿ ಮತ್ತು ಸರ್ವಿಸ್‌ ಬಸ್‌ ಸಿಬಂದಿಯ ನಡುವೆ ಜಗಳ: ಪ್ರಕರಣ ದಾಖಲು

ಸಿಟಿ ಮತ್ತು ಸರ್ವಿಸ್‌ ಬಸ್‌ ಸಿಬಂದಿಯ ನಡುವೆ ಜಗಳ: ಪ್ರಕರಣ ದಾಖಲು

0
ಸಿಟಿ ಮತ್ತು ಸರ್ವಿಸ್‌ ಬಸ್‌ ಸಿಬಂದಿಯ ನಡುವೆ ಜಗಳ: ಪ್ರಕರಣ ದಾಖಲು

ಮಂಗಳೂರು: ಸಿಟಿ ಮತ್ತು ಸರ್ವಿಸ್‌ ಬಸ್‌ ಸಿಬಂದಿಯ ನಡುವೆ ಜಗಳ ನಡೆದ ಘಟನೆ ನಗರದ ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ನಡೆದಿದೆ.

ಸರ್ವಿಸ್‌ ಬಸ್‌ನ ಚಾಲಕ ಮತ್ತು ನಿರ್ವಾಹಕರಿಗೆ ಸಿಟಿ ಬಸ್‌ ಚಾಲಕ – ನಿರ್ವಾಹಕರು ಬೈದು ಬಸ್ಸಿನ ಒಂದು ಬದಿಯ ಕನ್ನಡಿಯನ್ನು ಒಡೆದು ಹಾಕಿರುವ ಕುರಿತಂತೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿನ್ನಿಗೋಳಿ ಕಟೀಲು ನಡುವೆ ಸಂಚರಿಸುವ ‘ಟೀನಾ’ ಹೆಸರಿನ ಸರ್ವಿಸ್‌ ಬಸ್‌ನಲ್ಲಿ ಮಸೂದ್‌ ಅಹಮ್ಮದ್‌ ಚಾಲಕನಾಗಿ ಮತ್ತು ಹಸನ್‌ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ರವಿವಾರ ಸಂಜೆಯ ಟ್ರಿಪ್‌ನಲ್ಲಿ 4.20ರ ವೇಳೆಗೆ ಕೊಟ್ಟಾರ ಚೌಕಿ ಕಡೆಗೆ ಬಂದಿದ್ದಾರೆ.

ಈ ವೇಳೆ ಹಿಂದಿನಿಂದ ಬಂದ ‘ದೀದರ್‌’ ಹೆಸರಿನ ಸಿಟಿ ಬಸ್‌ ಚಾಲಕ ಓವರ್‌ಟೇಕ್‌ ಮಾಡಿಕೊಂಡು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಬಳಿಕ 4.30ರ ವೇಳೆಗೆ ಉರ್ವಸ್ಟೋರ್‌ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಓವರ್‌ ಟೇಕ್‌ ಮಾಡಿಕೊಂಡು ಬಂದು ಅಡ್ಡಲಾಗಿ ಬಸ್‌ ತಂದು ನಿಲ್ಲಿದ್ದಾನೆ.

ಬಳಿಕ ನಿರ್ವಾಹಕ ಸಪೀಲ್‌ ಮರದ ಹಿಡಿಯಿರುವ ದೊಡ್ಡ ಬ್ರಶ್‌ನಲ್ಲಿ ಚಾಲಕ ಕುಳಿತುಕೊಳ್ಳುವ ಬಲಬದಿಯ ಸೈಡ್‌ ಮಿರರ್‌ ಮತ್ತು ಸೈಡ್‌ ಗ್ಲಾಸ್‌ ಅನ್ನು ಒಡೆದು ಜಖಂಗೊಳಿದ್ದಾನೆ. ಇದರಿಂದಾಗಿ ಸುಮಾರು 4,000 ರೂ.ನಷ್ಟ ಉಂಟಾಗಿದೆ ಎಂದು ದೂರು ದಾಖಲಿಸಿದ್ದಾರೆ.

 

LEAVE A REPLY

Please enter your comment!
Please enter your name here