Home ಸುದ್ದಿಗಳು ಸಿಬಿಐ ಅಧಿಕಾರಿ ಎಂದು ನಂಬಿಸಿ 31ಲಕ್ಷ ರೂ. ವಂಚನೆ

ಸಿಬಿಐ ಅಧಿಕಾರಿ ಎಂದು ನಂಬಿಸಿ 31ಲಕ್ಷ ರೂ. ವಂಚನೆ

0
ಸಿಬಿಐ ಅಧಿಕಾರಿ ಎಂದು ನಂಬಿಸಿ 31ಲಕ್ಷ ರೂ. ವಂಚನೆ

ಮಂಗಳೂರು: ಸಿಬಿಐ ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ 31,12,000 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದೂರುದಾರರಿಗೆ ಕರೆ ಮಾಡಿದ ವ್ಯಕ್ತಿ ನಿಮ್ಮ ಹೆಸರಿನಲ್ಲಿ 2 ಸಿಮ್‌ ಚಾಲ್ತಿಯಲ್ಲಿದೆ. ಒಂದು ಸಿಮ್‌ ಮೂಲಕ ಕಾನೂನು ಬಾಹಿರ ಸಂದೇಶ ರವಾನೆಯಾಗಿದೆ. ಮುಂಬಯಿನ ಅಗ್ರಿಪಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿದೆ.

ಜೆಟ್‌ ಏರ್‌ವೇಸ್‌ ಮಾಲಕ ನರೇಶ್‌ ಗೋಯೆಲ್‌ ಮನೆಗೆ ದಾಳಿ ಮಾಡಿದಾಗ ಪತ್ತೆಯಾಗಿರುವ ಡೆಬಿಟ್‌ ಕಾರ್ಡ್‌ ನಿಮ್ಮ ಹೆಸರಿದೆ. ಮುಂಬಯಿಯಲ್ಲಿ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಖಾತೆ ತೆರೆದು ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆ. ಈ ಖಾತೆಯಿಂದ ವಿದೇಶಗಳಿಗೆ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಭಯಪಡಿಸಿದ್ದಾರೆ.

ಈ ಕೇಸ್‌ ಸರಿಪಡಿಸಲು ನಿಮ್ಮ ಎಲ್ಲ ಬ್ಯಾಂಕ್‌ ಖಾತೆಗಳ ಲ್ಲಿರುವ ಹಣವನ್ನು ನಾವು ನೀಡುವ ಬ್ಯಾಂಕ್‌ ಖಾತೆಗೆ ವರ್ಗಾಯಿಸುವಂತೆ ನಂಬಿಸಿದ್ದಾರೆ. ಅ.19ರ ತನಕ ವಿವಿಧ ಬ್ಯಾಂಕ್‌ಗಳಲ್ಲಿದ್ದ ಒಟ್ಟು 31,12,000 ರೂ. ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ಸಂಶಯ ಬಂದು ಮನೆಯವರಿಗೆ ತಿಳಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಆರೋಪಿಗಳಾದ ಸಂದೀಪ್‌ ರಾವ್‌, ಸಂಜನಾ ಹಾಗೂ ನವೋಜೋತ್‌ ಸಿಮಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here