
ಸುಳ್ಯ: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಡೀಸೆಲ್ ಸಾಗಾಟದ ಟ್ಯಾಂಕರ್ ರಸ್ತೆ ಮದ್ಯೆ ಪಲ್ಟಿಯಾದ ಘಟನೆ ನಡೆದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಮಾಣಿ – ಮೈಸೂರು ಹೆದ್ದಾರಿಯ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿ ಟ್ಯಾಂಕರ್ ನಲ್ಲಿದ್ದ ಡೀಸಲ್ ಸೋರಿಕೆಯಾಗಿದೆ.
ಈ ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ.
