
ನವದೆಹಲಿ: ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ, ಪ್ರಧಾನಿಗಳಿಗೆ ಆರ್ಥಿಕ ಸಲಹೆ ನೀಡುತ್ತಿದ್ದ, ಬಿಬೇಕ್ ದೇಬರಾಯ್(69 ) ಅವರು ಇಂದು ಮುಂಜಾನೆ ಗಂಟೆಗೆ ನಿಧನರಾಗಿದ್ದಾರೆ.
ವಿವೇಕ್ ದೇಬ್ರಾಯ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ವಿವೇಕ್ ದೇಬ್ರಾಯ್ ಅವರು ಮೇಘಾಲಯದಲ್ಲಿ ಜನಿಸಿದರೂ, ಓದಿದ್ದು ಕೋಲ್ಕತಾದಲ್ಲಿ. ಲಂಡನ್ನ ಕೇಂಬ್ರಿಡ್ನಲ್ಲಿ ಅರ್ಥಶಾಸ್ತ್ರದ ಉನ್ನತ ಶಿಕ್ಷಣ ಪಡೆದಿದ್ದರು.
2017ರ ಸೆಪ್ಟೆಂಬರ್ನಿಂದ ಅವರು ಪ್ರಧಾನಿಗಳಿಗೆ ಆರ್ಥಿಕ ಸಲಹೆ ನೀಡುವ ಮಂಡಳಿಯ (ಇಎಸಿ ಪಿಎಂ) ಅಧ್ಯಕ್ಷರಾಗಿದ್ದರು. 2024ರ ಜುಲೈ ತಿಂಗಳಲ್ಲಿ ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕ್ಸ್ ಅಂಡ್ ಎಕನಾಮಿಕ್ಸ್ ಸಂಸ್ಥೆಯ ಚಾನ್ಸಲರ್ ಆಗಿ ನೇಮಕವಾಗಿದ್ದರು.
