
ಉಡುಪಿ: ದಿನೇ ದಿನೇ ಆನ್‌ಲೈನ್‌ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪೂರ್ಣಿಮಾ ಎಂಬವರ ಸಹೋದರನಿಗೆ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಲಾಭಾಂಶ ಪಡೆಯಬಹುದೆಂದು ತಿಳಿಸಿ ಆಸೆ ಹುಟ್ಟಿಸಿದ್ದಾನೆ.
ಆತ ಗ್ಲೋಬಲ್ ಟ್ರೇಡ್ ಆ್ಯಪ್ ಇಂಡಿಯನ್ ಅಪ್ಲಿಕೇಶನ್ ಲಿಂಕ್ ಒಂದನ್ನು ಕಳಿಸಿದ್ದು ಅದರಲ್ಲಿ ತಿಳಿಸಿದಂತೆ ಅದನ್ನು ದೂರುದಾರರ ಸಹೋದರ ಬಳಸಿ ಹಂತ ಹಂತವಾಗಿ 27,19,565 ರೂ. ಡೆಪಾಸಿಟ್ ಮಾಡಿದ್ದರು.
ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ವಾಪಸ್ ನೀಡಿದೆ ನಂಬಿಸಿ, ಮೋಸ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
