
ಮಂಗಳೂರು: ಆನ್‌ಲೈನ್‌ನಲ್ಲಿ ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಭಾರೀ ವಂಚನೆ ಮಾಡಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23) ಮತ್ತು ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಎಂದು ಗುರುತಿಸಲಾಗಿದೆ.
ಇವರು ಮಂಗಳೂರಿನ ವಿಳಾಸ ನೀಡಿ ಅಮೆಜಾನ್ ಕಂಪೆನಿಯ ಆನ್‌ಲೈನ್ ಮಾರುಕಟ್ಟೆಯಿಂದ ವಿವಿಧ ರೀತಿಯ ಬೆಲೆ ಬಾಳುವ ಸಾಮಗ್ರಿಗಳನ್ನು ಆರ್ಡರ್ ಮಾಡಿ, ಅದನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಭಾರೀ ಮೋಸ ಮಾಡಿದ್ದಾರೆ.
ಸಾಮಗ್ರಿಗಳ ಡೆಲಿವರಿ ವೇಳೆ ಅಮಿತ್ ಹೆಸರಿನ ಓರ್ವ ವ್ಯಕ್ತಿ ಮಾತ್ರವಲ್ಲದೆ ಇನ್ನೋರ್ವ ಕೂಡ ಬಂದಿದ್ದ. ಓರ್ವ ಡೆಲಿವರಿ ಬಾಯ್ ಜತೆಗೆ ಡೆಲಿವರಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾಗ ಇನ್ನೋರ್ವ ಬಾಕ್ಸ್‌ಗಳ ಮೇಲಿನ ಲೇಬಲ್‌ಗಳನ್ನು ಬದಲಾಯಿಸಿದ್ದ.
ಆರೋಪಿ ರಾಜ್ ಕುಮಾರ್ ಮೀನಾ “ಅಮಿತ್’ ಹೆಸರಿನಲ್ಲಿ ಆರ್ಡರ್ ಬುಕ್ ಮಾಡಿದ್ದ. ಸುಭಾಷ್ ಗುರ್ಜರ್ ಆತನಿಗೆ ಸಹಕರಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಉರ್ವ ಪೊಲೀಸರು ಬಾಡಿ ವಾರಂಟ್ ಪಡೆದು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆತ ನೀಡಿದ ಮಾಹಿತಿಯಂತೆ ಮತ್ತೋರ್ವ ಆರೋಪಿ ಸುಭಾಷ್ ಗುರ್ಜರ್‌ನನ್ನು ಬಂಧಿಸಲಾಗಿದೆ.
