
ಮಣಿಪಾಲ: ಮೀನುಗಾರಿಕೆ ಬಂದರುಗಳ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.
ಅನುದಾನಕ್ಕಾಗಿ 22 ಕೋ.ರೂ. ವೆಚ್ಚ ಏರಿಕೆಯಾಗಿದ್ದು, ಈ ಕಡತ ಸದ್ಯ ಹಣಕಾಸು ಇಲಾಖೆಯಲ್ಲಿದೆ. ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಬೇಕು ಎಂದರು.
ಕೋಡಿ ಕನ್ಯಾನ ಬಂದರಿನ ಡ್ರಜ್ಜಿಂಗ್ ಸಹಿತ 13.50 ಕೋ.ರೂ.ಗಳ ವಿವಿಧ ಕಾಮಗಾರಿಯ ಪ್ರಸ್ತಾವನೆಯು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಕೋಡಿಬೆಂಗ್ರೆ ಮೀನು ಹರಾಜು ಕೇಂದ್ರದ ಮೇಲ್ಛಾವಣಿ 58 ಲಕ್ಷ ರೂ.ಗಳಲ್ಲಿ ಆಗಬೇಕಿದ್ದು, ಇನ್ನೂ ಅನುದಾನ ಮಂಜೂರಾಗಿಲ್ಲ ಎಂದರು
ಆದಷ್ಟು ಶೀಘ್ರ ಈ ಎರಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
