Home ಸುದ್ದಿಗಳು ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ: ಸಚಿವ ಮಹದೇವಪ್ಪ

ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ: ಸಚಿವ ಮಹದೇವಪ್ಪ

0
ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ: ಸಚಿವ ಮಹದೇವಪ್ಪ

ಬೆಂಗಳೂರು: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಡಾ ಕೇಸ್‌ನಲ್ಲಿ ತನಿಖೆಗೆ ಬರುವಂತೆ ಲೋಕಾಯುಕ್ತ ಸಿಎಂಗೆ ನೋಟಿಸ್ ನೀಡಿರುವ ವಿಚಾರಕ್ಕೆ ಮಾತನಾಡಿ, ಸಿಎಂ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಅವರು ಕೂಡಾ ಕಾನೂನಿನ ಒಳಗೆ ಬರುತ್ತಾರೆ. ಅವರೇ ವಿಚಾರಣೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಯಾರು ಏನೇ ಮಾತಾಡಿದರು ಸಿಎಂ ಗಟ್ಟಿಯಾಗಿ ಇದ್ದಾರೆ. ನೈತಿಕವಾಗಿ ಸಿಎಂ ಗಟ್ಟಿಯಾಗಿ ಇದ್ದಾರೆ. ಮುಡಾ ಕೇಸ್ ಸಿಎಂ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತವಾದ ಷಡ್ಯಂತ್ರ. 40 ವರ್ಷಗಳಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಸಿದ್ದರಾಮಯ್ಯ ಆಡಳಿತ ಮಾಡಿಕೊಂಡು ಬಂದಿದ್ದರು. ಸಿದ್ದರಾಮಯ್ಯ ಶುದ್ಧ ಹಸ್ತರಾಗಿ ಇದ್ದಾರೆ. ಮುಂದೆಯೂ ಇರುತ್ತಾರೆ ಎಂದರು.

ನಿಖೆಗೂ ಅವರ ಸ್ಥಾನಕ್ಕೂ ಸಂಬಂಧವಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಯಾವತ್ತು ಬದಲಾವಣೆ ಆಗುವುದಿಲ್ಲ. ಸೆಕ್ಷನ್ ಬದಲಾವಣೆ ಆಗುವುದಿಲ್ಲ. ಸರ್ಕಾರದ ಅಧೀನ ಸಂಸ್ಥೆಗಳು ಸಿಎಂರನ್ನು ಸರಿಯಾಗಿ ತನಿಖೆ ಮಾಡುವುದಿಲ್ಲ ಅನ್ನುವುದು ಕೆಲವರ ಭಾವನೆ. ಅವೆಲ್ಲ ಅಂತೆ-ಕಂತೆಗಳು. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿದರು.

 

LEAVE A REPLY

Please enter your comment!
Please enter your name here