Home ಸುದ್ದಿಗಳು ಮಿನಿ ಗೂಡ್ಸ್‌ ಟೆಂಪೋ ಹರಿದು ಮೂರು ವರ್ಷದ ಮಗು ಸಾವು

ಮಿನಿ ಗೂಡ್ಸ್‌ ಟೆಂಪೋ ಹರಿದು ಮೂರು ವರ್ಷದ ಮಗು ಸಾವು

0
ಮಿನಿ ಗೂಡ್ಸ್‌ ಟೆಂಪೋ ಹರಿದು ಮೂರು ವರ್ಷದ ಮಗು ಸಾವು

ಬಂಟ್ವಾಳ: ನಿಲ್ಲಿಸಿದ್ದ ಮಿನಿ ಗೂಡ್ಸ್‌ ಟೆಂಪೋವೊಂದು ಹಿಮ್ಮುಖವಾಗಿ ಚಲಿಸಿ ಟೆಂಪೋದ ಹಿಂದೆ ಆಟವಾಡುತಿದ್ದ ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.

ಬಂಟ್ವಾಳದ ಲೊರೆಟ್ಟೋಪದವಿನ ಟಿಪ್ಪುನಗರದಲ್ಲಿ ಈ ಘಟನೆ ನಡೆದಿದ್ದು, ಫರಂಗಿಪೇಟೆ ಸಮೀಪದ ಪತ್ತನಬೈಲು ನಿವಾಸಿ ಉನೈಸ್‌ ಅವರ ಪುತ್ರಿ ಆಶೀಕಾ ಮೃತ ಮಗು.

ಉನೈಸ್‌ ಅವರ ಪತ್ನಿಯ ತಾಯಿ ಮನೆ ಲೊರೆಟ್ಟೋಪದವಿನಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿತ್ತು. ಈ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಮಗುವಿನ ತಾಯಿಯ ಸಹೋದರನ ಟೆಂಪೋ ಏಕಾಏಕಿ ಹಿಂದಕ್ಕೆ ಬಂದಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರು ಮಗು ಅದಾಗಲೇ ಮೃತಪಟ್ಟಿತ್ತು.

ಈ ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here