
ಉಡುಪಿ: ವಕ್ಫ್ ಗೆ ಸಂಬಂಧಿಸಿದಂತೆ ಯಾರಿಗೂ ಅನ್ಯಾಯ ಆಗದಂತೆ ಸರಕಾರ ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಈ ಕುರಿತು ವೀಡಿಯೋ ಸಂದೇಶ ನೀಡಿದ ಅವರು, ರೈತರು, ಜನ ಸಾಮಾನ್ಯರ ಆಸ್ತಿಯಲ್ಲಿ ವಿಶೇಷವಾಗಿ ಮಠ, ಮಂದಿರಗಳ ಜಮೀನನಲ್ಲಿ ವಕ್ಫ್ ಹೆಸರು ತಳುಕಿ ಹಾಕಿಕೊಳ್ಳುತ್ತಿರುವುದು ಸರಿಯಲ್ಲ. ವಕ್ಫ್ ಸಂಬಂಧ ಸರಕಾರದ ಕಾನೂನು ದುರ್ಬಲವಾಗಿದ್ದು ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ ಎಂದರು.
ಹಿಂದೂಗಳಿಗೆ, ಮಠ, ಮಂದಿರಕ್ಕೆ ಅನ್ಯಾಯವಾಗಿದೆ ಎಂದೂ ಕೇಳಿ ಬರುತ್ತಿದೆ. ರೈತರು ಸೇರಿದಂತೆ ಯಾರ್ಯಾರಿಗೆ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ನ್ಯಾಯ ಒದಗಿಸುವುದು ಸರಕಾರದ ಕರ್ತವ್ಯ ಆಗಿದೆ.
ಹೀಗಾಗಿ ಸಮಸ್ಯೆಯನ್ನು ಸರಕಾರ ಶೀರ್ಘ ಹಾಗೂ ನ್ಯಾಯೋಚಿತವಾಗಿ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
