Home ಸುದ್ದಿಗಳು ಮೀನು ಪ್ರಿಯರಿಗೊಂದು ಸಿಹಿ ಸುದ್ದಿ: ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ

ಮೀನು ಪ್ರಿಯರಿಗೊಂದು ಸಿಹಿ ಸುದ್ದಿ: ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ

0
ಮೀನು ಪ್ರಿಯರಿಗೊಂದು ಸಿಹಿ ಸುದ್ದಿ: ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ

ಮಂಗಳೂರು: ಮೀನು ಪ್ರಿಯರಿಗೊಂದು ಸಿಹಿ ಸುದ್ದಿ ಕಿಲೋಗೆ 200-250 ರೂ. ದರವಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ.

ಹೆದ್ದಾರಿ ಬದಿ ಅಲ್ಲಲ್ಲಿ ವ್ಯಾಪಾರಿಗಳು ಬಂಗುಡೆಯನ್ನೇ ಮಾರಾಟ ಮಾಡು ತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕೆಲವು ದಿನಗಳ ಹಿಂದೆ ಮಂಗಳೂರಿನ ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ!

ವಿದೇಶಗಳಲ್ಲಿ ಬಂಗುಡೆ ಮೀನಿಗೆ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಬಂಗುಡೆಗೆ ಕೆಲವು ಸಮಯದಿಂದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಮೀನು ರಫ್ತು ಸಂಸ್ಥೆಗಳು ಬಂಗುಡೆ ನಿರ್ಯಾತ ಪ್ರಮಾಣವನ್ನು ಕಡಿಮೆ ಮಾಡಿವೆ.

ಬಂಗುಡೆಗಳಿಗೆ ಮುಖ್ಯವಾಗಿ ಚೀನಾ ಅತೀ ದೊಡ್ಡ ಮಾರುಕಟ್ಟೆ ಯಾಗಿದೆ. ಉಳಿದಂತೆ ಬ್ಯಾಂಕಾಕ್‌, ಥೈಲ್ಯಾಂಡ್, ವಿಯೆಟ್ನಾಂ ಮೊದಲಾದೆಡೆಗೆ ರಫ್ತಾಗುತ್ತದೆ ಎನ್ನುತ್ತಾರೆ ಮೀನುಗಾರರು.

ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿಗೆ 150 ರೂ. ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ; ಅಂಜಲ್‌ 800 ರೂ., ಮಾಂಜಿ 550 ರಿಂದ 650 ರೂ. ಆಸುಪಾಸಿನಲ್ಲಿದೆ.

 

LEAVE A REPLY

Please enter your comment!
Please enter your name here